ಸಮೃದ್ಧಿ ಜೀವನದ ದಾರಿದೀಪಗಳು

Author : ಜಿ.ಎಸ್. ಗೋನಾಳ

Pages 136

₹ 190.00




Year of Publication: 2022
Published by: ವಿಶಾಲ ಪ್ರಕಾಶನ
Address: ಮಾದಿನೂರು-ಕೊಪ್ಪಳ
Phone: 9448025067

Synopsys

‘ಸಮೃದ್ಧಿ ಜೀವನದ ದಾರಿದೀಪಗಳು’ ಜಿ.ಎಸ್. ಗೋನಾಳ ಅವರ ವೈಚಾರಿಕ ಸಂಕಲನವಾಗಿದೆ. ಕೃತಿಯ ಕುರಿತು ರಾಜೇಂದ್ರ ಎಸ್. ಗಡಾದ ಹೀಗೆ ಹೇಳುತ್ತಾರೆ; ಮನಸ್ಸನ್ನು ಕುರಿತು 'ಸಹಜ ಸಮೃದ್ಧಿಯ ಜೀವನಕ್ಕೆ ಸ್ಫೂರ್ತಿಯ ಸೆಲೆಗಳು' ಎಂಬ ಲೇಖನದಲ್ಲಿ ಲೇಖಕರು 'ಮಾನವನು ಯಾವಾಗಲೂ ತಮ್ಮ ಮಸನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಮನಸ್ಸನ್ನು ಮೈಲಿಗೆ ಮಲೀನಗೊಳಸಿಕೊಳ್ಳಬಾರದು ಒಮ್ಮೆ ಮನಸ್ಸು ಮಲೀನಗೊಂಡರೆ ಅದನ್ನು ಸರಿದಾರಿಗೆ ತರುವುದು ಕಷ್ಟದ ಕೆಲಸವೇ ಸರಿ ಎಂದು ಉತ್ತಮವಾದ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. 'ಸಾಧನೆ ಎಂಬುದು ಜೀವನದಲ್ಲಿ ಆಗುವಂತಹದ್ದಲ್ಲ. ಸತತ ಪರಿಶ್ರಮವೇ ಅದರ ಜೀವಾಳ' ಎಂದಿರುವುದು ತುಂಬಾ ಸಮಂಜಸವಾಗಿದೆ. “ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ” ಆದರ್ಶವಿಲ್ಲದೆ ಬಾಳಿ ಬದುಕಿದರೆ ಈ ಮಾನವನ ಬದುಕಿನ ಜೀವನಕ್ಕೆ ಅವಮಾನ ಎಂಬ ಸತ್ಯ ಸಂಗತಿಯನ್ನು ಅರಿತು ಯುವಕ ಯುವತಿಯರು ಭಾವಿ ಪ್ರಜೆಗಳೆಲ್ಲರೂ ಸಹ ಎಚ್ಚೆತ್ತುಕೊಂಡು ತಮ್ಮ ಜೀವನವನ್ನು ಆದರ್ಶವಾಗಿಸಿಕೊಳ್ಳಲು ಮುಂದಾಗಬೇಕು ಎಂಬ ಸಂದೇಶವನ್ನು, 'ಶ್ರೇಷ್ಠ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು ಮಾನವೀಯ ಲಕ್ಷಣ' ಲೇಖನದಲ್ಲಿ ಹೇಳಿದರೆ; ಪರೋಪಕಾರಿ ಜೀವಿಗಳಾಗಿ ಇತರರಿಗೆ ನೆರಳಾಗಿ ಜೀವನವನ್ನು ಸಾರ್ಥಕಪಡಿಸಿಕೊಳ್ಳುವುದಕ್ಕಾಗಿ ಮನುಜರು ಸದಾ ಸಾರ್ಥಕವಾದ ಜೀವನದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಕಳಕಳಿಯನ್ನು ಇನ್ನೊಂದು ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ. ಪರಿಪೂರ್ಣ ಬದುಕನ್ನು ಹಸಿನಾಗಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ಮಾರ್ಮಿಕವಾಗಿ ಗೋನಾಳರು, ಮಾನವನು ನಿಜವಾಗಿ ಮನುಷ್ಯನಾಗಿ ಈ ಪ್ರಪಂಚದಲ್ಲಿ ಬಾಳಿದರೆ, ಅವನಲ್ಲಿ ಬದುಕುವ ಕಲೆಯು ಇರಬೇಕು. ಜೊತೆಗೆ ಪ್ರೀತಿ, ಶಾಂತಿ, ಸಮೃದ್ಧಿ, ದಾನ-ಧರ್ಮ, ಭಕ್ತಿ ಇತ್ಯಾದಿಗಳು ಇದ್ದಾಗ ಮಾತ್ರವೇ ಪರಿಪೂರ್ಣತೆಯ ಜೀವನ ಸಾಧ್ಯವಾಗುತ್ತದೆ ಎಂಬುದನ್ನು ವೇದ, ಉಪನಿಷತ್ತು ಸಾಹಿತ್ಯದ ಸಾಗರದಲ್ಲಿಯ ಮುತ್ತುರತ್ನಗಳನ್ನು ಹೆಕ್ಕಿ ತೆಗೆದು ಅದರ ಅಂತರಂಗ ದರ್ಶನವನ್ನು ಗೋನಾಳರು ಓದುಗರಿಗೆ ಮೂಡಿಸಿದ್ದಾರೆ.

About the Author

ಜಿ.ಎಸ್. ಗೋನಾಳ

ಜಿ.ಎಸ್. ಗೋನಾಳ ಅವರು ಕ್ರಿಯಾಶೀಲ ಪತ್ರಕರ್ತ, ಸಮಾಜಮುಖಿ ಚಿಂತಕ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಮೂಲತಃ ಕೊಪ್ಪಳ ತಾಲೂಕಿನ ಮಾದಿನೂರಿನ ಅಪ್ಪಟ ಗ್ರಾಮೀಣ ಕೃಷಿಕ ಮನೆತನದ ಹಿನ್ನೆಲೆಯವರು. ಧಾರವಾಡ, ಕೊಲ್ಲಾಪುರ ಮಹಾವಿದ್ಯಾಲಯಗಳಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೊಪ್ಪಳ ಜಿಲ್ಲಾ ವಾರ್ತಾ ಪತ್ರಿಕೆಯ ಮೂಲಕ ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಜಿಲ್ಲೆಯಲ್ಲಿ ಚಿರಪರಿಚಿತರು. ಕೃತಿಗಳು: ಪ್ರಜಾ ರಕ್ಷಕರೇ ಭಕ್ಷಕರಾದರೇ..?, ಅಂತರಂಗದೊಳ್ ಚಿಗುರಲಿ ಶರಣರ ವಚನಾಮೃತಗಳು, ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ, ಸಂಸಾರದಲ್ಲಿ ಸಾಮರಸ್ಯ, ಸಮೃದ್ಧಿ ಜೀವನದಲ್ಲಿ ದಾರಿದೀಪಗಳು ...

READ MORE

Related Books