”ಸಮನ್ವಯತೆ’ ಭಾಗ್ಯ ನಂಜುಂಡಸ್ವಾಮಿಯವರ ಲೇಖನಗಳ ಸಂಕಲನ. ಅತ್ಯಂತ ಸರಳ ಭಾಷೆಯಲ್ಲಿ ಬಾಲ್ಯದಿಂದ ಹಿಡಿದು ವಯೋವೃದ್ದವರೆಗಿನ ವಿವಿಧ ಲೇಖನಗಳನ್ನು ಹಾಗೂ ಸಂಪ್ರದಾಯಬದ್ದವಾದ ಅನೇಕ ಲೇಖನಗಳನ್ನು ಪತ್ರಿಕೆಗಳಲ್ಲಿ ಬರೆದು ಜನತೆಗೆ ಮನವರಿಕೆ ಮಾಡಿಕೊಡುವುದರ ಮೂಲಕ ಬರವಣಿಗೆಯಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಲೋಕದಲ್ಲಿ ಹಿರಿಯರಾದ ನಾ. ಡಿಸೋಜಾರವರು ಮುನ್ನುಡಿಯನ್ನು ಬರೆಯುವುದರೊಂದಿಗೆ ಕೃತಿಗೆ ಹೆಚ್ಚಿನ ಮೆರುಗನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ಬರುವ ಮಕ್ಕಳ ಬೆಳವಣಿಗೆ ಕುರಿತ ಲೇಖನಗಳು, ಶಿಕ್ಷಣದ ಬಗೆಗಿನ ಚಿಂತನೆಗಳು, ಹೆಣ್ಣಿನ ಕುರಿತಾದ ಲೇಖನಗಳು, ಕನ್ನಡ ಪರ ಲೇಖನಗಳು, ಹಬ್ಬಗಳ ಕುರಿತಾದ ವಿಚಾರಗಳು, ಪ್ರತಿಯೊಂದು ವಿಚಾರದ ಮೇಲೂ ಬೆಳಕು ಚೆಲ್ಲುವ ಕೃತಿ ಇದು.