ಲೇಖಕಿ ಡಾ. ಶಾರದಾದೇವಿ ಎಸ್ ಜಾಧವ ಅವರ ‘ಸಮನ್ವಯ’ ಕೃತಿಯು ಎರಡು ಭಾಗಗಳನ್ನು ಒಳಗೊಂಡಿದೆ. ಮೊದಲನೇ ಭಾಗದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ 10 ಲೇಖನಗಳಿವೆ. ಭಾಗ ಎರಡರಲ್ಲಿ, ಸಾಧಕರ ಮತ್ತು ವ್ಯಕ್ತಿ ಚಿತ್ರಣ ಒಳಗೊಂಡಂತೆ 5 ಲೇಖನಗಳಿವೆ. ಸಾಹಿತ್ಯ-ಸಂಸ್ಕೃತಿಯನ್ನು ಕೇಂದ್ರೀಕರಿಸಿ ವ್ಯಕ್ತಿ ಚಿತ್ರಣ ನೀಡುವ ಇಲ್ಲಿಯ ಲೇಖನಗಳು, ಸರಳ ಭಾಷೆಯಿಂದಾಗಿ ಓದಿಸಿಕೊಳ್ಳುತ್ತವೆ.
ಲೇಖಕಿ ಡಾ. ಶಾರದಾದೇವಿ ಜಾಧವ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದಣ್ಣೂರ ತಾಂಡಾದವರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವೀಧರರು. ಪ್ರಸ್ತುತ, ಕಲಬುರಗಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರು. ಕೃತಿಗಳು: ಸ್ತ್ರೀ ಪ್ರಧಾನ ಜನಪದ ಕಥನಗೀತೆಗಳು, ಸಾಹಿತ್ಯ ಶೋಧ ಭಾಗ-1 ಮತ್ತು ಭಾಗ-2, ಜನಪದ ಕಥಾನಕಗಳು, ನಡುಗನ್ನಡ ಕಾವ್ಯ ವೈವಿಧ್ಯ, ಲಲಿತ ಪ್ರಬಂಧಗಳು, ಸಮನ್ವಯ ...
READ MORE