ಸಮಾಜಮುಖಿ

Author : ಮಹೇಶ ಮನ್ನಯ್ಯನವರಮಠ

Pages 184

₹ 200.00




Year of Publication: 2022
Published by: ಸಾಧನಾ ಪಬ್ಲಿಕೇಷನ್ಸ್
Phone: 9480088960

Synopsys

‘ಪ್ರಜಾವಾಣಿ’ಯಲ್ಲಿ 2021ರಲ್ಲಿ ಪ್ರಕಟಗೊಂಡ ಅವರ ಲೇಖನಗಳು ಈ ಕೃತಿಯಲ್ಲಿ ಮೇಳೈಸಿವೆ. ಅಸಂಖ್ಯ ಜನರ ಹೃದಯತಟ್ಟಿದ ಹಾಗೂ ಸ್ಥಳೀಯ ಆಡಳಿತಕ್ಕೂ ಚೇತನ ಪರವಾದ ಬಿಸಿಮುಟ್ಟಿಸಿದ ಲೇಖನಗಳು ಈ ಕೃತಿಯಲ್ಲಿದ್ದು, ಪತ್ರಿಕೆಯಲ್ಲಿ ಪ್ರಕಟವಾದ ಅಂದಿನ ದಿನಾಂಕವನ್ನು ಲೇಖನದ ಕೊನೆಗೆ ನಮೂದಿಸಿರುವುದು ಅರ್ಥಪೂರ್ಣವೆನಿಸುತ್ತದೆ. ಅಂದಿನ ಕಾಲಘಟ್ಟದಲ್ಲಿ ನಡೆದ ವಿದ್ಯಮಾನವನ್ನು ಓದುಗರು ಅರ್ಥೈಸಬಹುದಾಗಿದೆ. ಇಲ್ಲಿಯ ಲೇಖನಗಳು ಏಕಮುಖಿಯಾಗಿರದೆ ಬಹುಮುಖ ಆಯಾಮಗಳತ್ತ ನಮ್ಮ ಮನಸನ್ನು ಸೆಳೆಯುತ್ತವೆ. ಇದರಿಂದ ಇವರಲ್ಲಿಯ ಬಹುಮುಖ ಪ್ರತಿಭೆಯು ಅನಾವರಣಗೊಳ್ಳುತ್ತದೆ. ಪ್ರತಿ ಲೇಖನಕ್ಕೂ ಎರಡೇ ಪುಟ ಮೀಸಲಿಟ್ಟಿರುವುದು ಓದುಗರಿಗೂ ಏಕತಾನತೆ ಎನಿಸುತ್ತ ಕೃತಿ ಆಪ್ತವೆನಿಸುತ್ತದೆ. ಈ ಕೃತಿಯಲ್ಲಿ ಭಿನ್ನ ಭಿನ್ನವಾದ ೭೭ ಲೇಖನಗಳಿವೆ. ಕೇವಲ ಓದುವುದಕ್ಕಾಗಿ ಮಾತ್ರ ಸೀಮಿತವಾಗಿರದೆ ನಮ್ಮಲ್ಲಿ ಚಿಂತನಶೀಲತೆಯೊAದಿಗೆ ಸಾಮಾಜಿಕ ಕಳಕಳಿ ಇರಬೇಕು ಎಂಬುದು ಈ ಲೇಖನಗಳಿಂದ ವೇದ್ಯವಾಗುತ್ತದೆ. ಒಂದು ಸಾಮಾಜಿಕ ಕಳಕಳಿ ಹೊಂದಿದ ಸುದ್ದಿ; ಲೇಖನ ಸ್ವರೂಪ ಪಡೆದಾಗ ಪರೋಕ್ಷವಾಗಿ ಲೇಖಕರ ಸಾಹಿತ್ಯಿಕ, ಸಾಂಸ್ಕೃತಿಕ ಕಾಳಜಿ ಎದ್ದು ಕಾಣಿಸುತ್ತದೆ. ಯಾವುದೇ ಒಂದು ಸುದ್ದಿ ಅರ್ಥಪೂರ್ಣ ಹಾಗೂ ಮೌಲ್ಯಯುತ ಆಗಬೇಕಾದರೆ ಆ ಸುದ್ದಿ ಮೂಲದ ನಿಕಟ ಪರಿಚಯ ಇರಬೇಕಾಗುತ್ತದೆ. ಆತ್ಮೀಯ ಪರಿಚಯದೊಂದಿಗೆ ಅದನ್ನು ಪ್ರಮಾಣ ಬದ್ಧವಾಗಿ ದಾಖಲು ಮಾಡಬೇಕಾಗುತ್ತದೆ. ಪ್ರಸ್ತುತ ಈ ಕೃತಿಯು ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಚಿತವಾಗಿದ್ದು, ಲೇಖಕರ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ.

About the Author

ಮಹೇಶ ಮನ್ನಯ್ಯನವರಮಠ

ಮಹೇಶ ಮನ್ನಯ್ಯನವರಮಠ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಪಟ್ಟಣದವರು. ಕಳೆದ ಮೂರು ದಶಕದಿಂದ ಮಹಾಲಿಂಗಪುರದಲ್ಲಿ ವಾಸವಿದ್ದಾರೆ. ಬಿ.ಕಾಂ ಪದವೀಧರರು. ಧಾರವಾಡ ಹಾಗೂ ವಿಜಯಪುರ ಆಕಾಶವಾಣಿ ಕೇಂದ್ರದಿಂದ ಯುವವಾಣಿಯಲ್ಲಿ ಕಥೆಗಳು ಹಾಗೂ ವರದಿಗಳು ಪ್ರಸಾರವಾಗಿವೆ. ನಾಡಿನ ವಿವಿಧ ಪತ್ರಿಕೆಗಳು ಸೇರಿದಂತೆ ವರದಿಗಾರರಾಗಿ ಕೆಲಸ ಮಾಡಿದ್ದು, ಸದ್ಯ ಪ್ರಜಾವಾಣಿಯ ಮಹಾಲಿಂಗಪುರದ ವರದಿಗಾರರು.  ಕೃತಿಗಳು: ನನ್ನ ಕಾವ್ಯ (ಕವನ ಸಂಕಲನ), ಬಾಗಿಲೊಳು ಕೈಮುಗಿದು (ಐತಿಹಾಸಿಕ ದೇವಾಲಯಗಳ ಪರಿಚಯ), ಕಾಡುವ ಮನಸುಗಳು, ಮನಸುಗಳ ಬೆನ್ನತ್ತಿ, ತುಂಬಿದ ಕೊಡಗಳು (ಲಲಿತ ಪ್ರಬಂಧಗಳು) ಪ್ರಶಸ್ತಿ-ಪುರಸ್ಕಾರಗಳು: ‘ನನ್ನ ಕಾವ್ಯ’ ಕವನಸಂಕಲನಕ್ಕೆ ಛಲಗಾರ ಪತ್ರಿಕೆಯಿಂದ ಸಾಹಿತ್ಯ ಶ್ರೀ ...

READ MORE

Related Books