‘ಸಮಚಿತ್ತ’ ವಿಶ್ವನಾಥ ಕಾರ್ನಾಡ ಅವರ ಲೇಖನಗಳಾಗಿವೆ. ನಮ್ಮ ಕನ್ನಡ ಸಾಹಿತ್ಯದಲ್ಲಿನ ಕೆಲವು ವಿಚಾರಗಳ ಬಗ್ಗೆ ನಿಸ್ಸಂಕೋಚವಾಗಿ ತುಲನೆ ಮಾಡಿರುವ ಲೇಖನಗಳು ಒಂದು ಭಾಗವಾದರೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮತ್ತು ಮುಂಬಯಿ ಕನ್ನಡಿಗರ ಕೆಲವು ಸಾಧನೆಗಳ ಬಗ್ಗೆಯೂ ಕೆಲವು ಬರಹಗಳಿವೆ.
ತುಳುನಾಡಿನ ಮುಲ್ಕಿ ಸಮೀಪದ ಕಾರ್ನಾಡಿನಲ್ಲಿ ಹುಟ್ಟಿದ ಡಾ. ಕೆ. ವಿಶ್ವನಾಥ ಕಾರ್ನಾಡರು (1940) ಓದಿಗೆ ಮತ್ತು ಉದ್ಯೋಗಕ್ಕಾಗಿ ಮುಂಬೈ ನಗರ ಸೇರಿದರು. ಕನ್ನಡ, ಇಂಗ್ಲಿಷ್ ಮತ್ತು ಇತಿಹಾಸ ಮೂರು ವಿಷಯಗಳಲ್ಲಿ ಎಂ.ಎ. ಮಾಡಿ, ಎಲ್. ಎಲ್.ಬಿ, ಬಿ.ಎಡ್.ಪದವಿ ಹಾಗೂ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಮುಂಬೈಯ ಮಹರ್ಷಿ ದಯಾನಂದ ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಮೂವತ್ತೈದು ವರ್ಷಗಳ ಕಾಲ ದುಡಿದು ನಿವೃತ್ತರಾಗಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ, ಎಂ.ಫಿಲ್ ಹಾಗೂ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. 'ತುಳುವರ ಮುಂಬಯಿ ವಲಸೆ-ಸಾಂಸ್ಕೃತಿಕ ಅಧ್ಯಯನ' ಎಂಬ ಸಂಶೋಧನಾ ಕೃತಿಯೂ ಸೇರಿದಂತೆ ಒಂಬತ್ತು ಕಥಾ ...
READ MOREಹೊಸತು-2004- ಜುಲೈ
ನಮ್ಮ ಕನ್ನಡ ಸಾಹಿತ್ಯದಲ್ಲಿನ ಕೆಲವು ವಿಚಾರಗಳ ಬಗ್ಗೆ ನಿಸ್ಸಂಕೋಚವಾಗಿ ತುಲನೆ ಮಾಡಿರುವ ಲೇಖನಗಳು ಒಂದು ಭಾಗವಾದರೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮತ್ತು ಮುಂಬಯಿ ಕನ್ನಡಿಗರ ಕೆಲವು ಸಾಧನೆಗಳ ಬಗ್ಗೆಯೂ ಕೆಲವು ಬರಹಗಳಿವೆ. ನಮ್ಮ ಸಂಸ್ಕೃತಿ, ಜಾನಪದ ಪ್ರಗತಿಶೀಲ ವಿಚಾರಗಳು, ಅಭಿವೃದ್ಧಿಯ ಮುನ್ನಡೆ ಇಲ್ಲಿನ ಲೇಖನಗಳಲ್ಲಿ ಚರ್ಚಿತವಾಗಿವೆ. ತಮ್ಮ ಸಾಹಿತ್ಯಾಭ್ಯಾಸದಲ್ಲಿ ವಸ್ತುವಿನ ಆಳವಾದ ಗ್ರಹಿಕೆಯಂತೆಯೇ ಸುತ್ತಮುತ್ತಲಿನ ಬದುಕಿನ ಇಂದಿನ ಚಲನವಲನಗಳನ್ನು ಸೂಕ್ಷ್ಮವಾಗಿ ಕಂಡು ಅಭಿವ್ಯಕ್ತಿಗೊಳಿಸಿದ್ದಾರೆ.