ಸಾಕ್ಷಿ24

Author : ಎಂ. ಗೋಪಾಲಕೃಷ್ಣ ಅಡಿಗ

Pages 126

₹ 12.00




Year of Publication: 1974
Published by: ಅಕ್ಷರ ಪ್ರಕಾಶನ
Address: ಸಾಗರ, ಕರ್ನಾಟಕ-577401

Synopsys

`ಸಾಕ್ಷಿ24’ ಗೋಪಾಲಕೃಷ್ಣ ಅಡಿಗ ಅವರ ಸಿನಿಮಾ ಬಗ್ಗೆ ಕುರಿತ ವಿಶೇಷ ಲೇಖನಗಳ ಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ಅಧ್ಯಾಯಗಳು ಹೀಗಿವೆ : ಶೇಕ್ ಸ್ಪಿಯರ್ ನ ಸಾನೆಟ್(ರಾಮಚಂದ್ರ ದೇವ), ಭಾರತದಲ್ಲಿ ಚಲಚಿತ್ರ ಸಂಸ್ಕೃತಿಯ ಪ್ರಸ್ತುತ ಸನ್ನಿವೇಶ(ಎಸ್.ದಿವಾಕರ್), ವ್ಯಾಪಾರಿ ಸಿನಿಮಾ ಪಲಾಯನ ಪಾತ್ರ(ನೀರದ್ ಮಹಾಪಾತ್ರ), ಚಲನಚಿತ್ರದಲ್ಲಿ ತಂತ್ರ ಮತ್ತು ಅಭಿವ್ಯಕ್ತಿ(ಕಾಸರವಳ್ಳಿ ಜಿ.ಗಿರೀಶ), ಹೊಸ ಜನಾಂಗ(ಡಿ.ಎಸ್.ನಾಗಭೂಷಣ), ನಂಬಲರ್ಹವಾದ ಸಿನಿಮಾದ ದಾರಿ(ಸುಮತೀಂದ್ರ ನಾಡಿಗ), ಕುಮಾರ್ ಶಹಾನಿ ಅವರ ಮಾಯಾದರ್ಪಣ್(ಕೆ.ವಿ.ಸುಬ್ಬಣ್ಣ), ಹುಡುಕಾಟ(ದೊಡ್ಡರಂಗೇಗೌಡ), ಗೆಳೆಯರು(ಎಂ.ಎನ್. ವ್ಯಾಸರಾವ್), ಭಾರತೀಪುರದ ಕುರಿತು(ಕೋ.ವಂ. ಕಾರಂತ), ಕನ್ನಡದಲ್ಲಿ ಭೌತವಿಜ್ಞಾನಿಗಳು, ಒಂದು ಅಧ್ಯಯನ(ಜಿ.ಟಿ.ನಾರಾಯಣರಾವ್), ಗಿರಾಕಿಗಳು(ಚೆನ್ನಣ್ಣನು), ರಾಮಚಂದ್ರ ದೇವ(ಎಂ.ಎ ಡೆಲ್ಲಿ)ಹೀಗೆ ಅನೇಕರಗಳು ವಿಚಾರಗಳು ಇಲ್ಲಿ ಪ್ರಸ್ತಾಪಿಸಲಾಗಿದೆ.

About the Author

ಎಂ. ಗೋಪಾಲಕೃಷ್ಣ ಅಡಿಗ
(18 February 1918 - 14 November 1992)

ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...

READ MORE

Related Books