ಡಾ. ಮಲ್ಲಯ್ಯ ಅತ್ತನೂರು ಅವರ ಲೇಖನಗಳ ಕೃತಿ-ಸಹಜ ನೋಟ. ಬಸವಣ್ಣ ಮತ್ತು ಸಹಕಾರ ತತ್ವ ವಿಚಾರಧಾರೆ, ಬಸವಣ್ಣನವರ 3 ವಚನಗಳ ಚಿಂತನೆ, ಕಲಬುರ್ಗಿ ಜಿಲ್ಲೆಯ ಆಧುನಿಕ ವಚನಕಾರರು, ಹೈದರಾಬಾದ್-ಕರ್ನಾಟಕ ಚಳವಳಿಗಳು, ಡಾಕ್ಟರ್ ಗವಿಸಿದ್ದಪ್ಪ ಪಾಟೀಲರ ಬದುಕು-ಬರಹ ಅವಲೋಕನ, ಮಹಿಳಾ ಚಿಂತಕಿ ಡಾ.ಗಾಯಕ್ವಾಡ್, ಕನ್ನಡ ಸಾಹಿತ್ಯಕ್ಕೆ ಲೇಖಕಿಯರ ಕೊಡುಗೆ ಸೇರಿದಂತೆ 32 ಲೇಖನಗಳು ಸಂಕಲನಗೊಂಡಿವೆ. ಕವಿ- ಸಾಹಿತಿ ಸೇರಿದಂತೆ ಒಟ್ಟು 26 ಲೇಖಕರ ಜೀವನ ಸಾಧನೆಯನ್ನು ಪರಿಚಯಿಸಲಾಗಿದೆ.
ಲೇಖಕ ಡಾ. ಮಲ್ಲಯ್ಯ ಅತ್ತನೂರು ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅತ್ತನೂರು ಗ್ರಾಮದವರು. ಎಂ.ಎ, ಪಿ ಎಚ್.ಡಿ ಪದವೀಧರರು. ಸದ್ಯ, ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ಕೃತಿಗಳು: ಸಹಜನೋಟ ...
READ MORE