ಸಹಜ ಖುಷಿ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

₹ 72.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ಲೇಖಕ ಜೋಗಿ (ಗಿರೀಶರಾವ್ ಹತ್ವಾರ್) ಅವರ ಕೃತಿ-ಸಹಜ ಖುಷಿ. ಸಹಜವಾದ ಆನಂದ-ಖುಷಿ ಎಂಬುದು ಆಂತರಿಕವಾಗಿರುತ್ತದೆ. ಅದು ಬಹಿರಂಗವಾಗಿರುವುದಿಲ್ಲ. ಅದನ್ನು ಋಷಿ-ಮುನಿಗಳು ತಮ್ಮ ಆತ್ಮದ ಮೇಲೆ ನಿಗಾ ಇಟ್ಟು, ಮನಸ್ಸನ್ನು ನಿಯಂತ್ರಿಸಿಕೊಂಡು ಖುಷಿ ಅನುಭವಿಸುತ್ತಿದ್ದರು. ಇಂತಹ ಚಿಂತನೆಯ ಮೂಸೆಯಲ್ಲಿ ಈ ಕೃತಿ ಮೂಡಿ ಬಂದಿದೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books