`ರಸಯಜ್ಞ’ ಕೃತಿಯು ಬಿ.ಎಚ್. ಶ್ರೀಧೃರ ಅವರ ಸಂಕಲನವಾಗಿದೆ. ಪಿ.ಎಮ್. ಹೆಗಡೆ ಹಾಗೂ ಪಿ.ವಿ. ಶಾಸ್ತ್ರಿ ಅವರ ಸಂಪಾದಿತ ಕೃತಿಯಾಗಿದೆ. "ಕಲೆಯೊಂದು ಕಲೆಗಾರನಿಗೆ ತಲೆ ತಪ್ಪಿಸಿಕೊಂಡು ಬಾಳಲು ಕಟ್ಟಿಕೊಂಡ ಗೂಡು” ಎಂಬ ಮಾತಿಗೆ ಶ್ರೀಧರರು ಅಪವಾದ. ಅವರ ನಿಸ್ಪೃಹತೆಯ, ನಿರ್ವ್ಯಾಜ ಮಮತೆಯ ಜೀನನದೃಷ್ಟಿಯಗಲಕ್ಕೆ, ಸುಸ್ಪಷ್ಟತೆಯ, ಸವಿಸ್ತಾರವಾದ ವಿಚಾರವರ್ತುಲಕ್ಕೆ ಜೀವನವೊಂದು ಸಾಲದು; ಕಲೆಯೂ ಬೇಕು; ಅದರ ಮೇಲಿನ ಧರ್ಮವೂ ಬೇಕು. ಸತ್ಕೃತಿಯಲ್ಲೂ ಸತ್ಕಾವ್ಯಕರ್ತನಲ್ಲೂ ಒಳಿತು ಚೆಲುವುಗಳ ಸಾಮರಸ್ಯ; ' ಸಾಹಿತ್ಯ, ಜೀವನದ ಅದ್ವೈತವನ್ನು ಕಾಣುತ್ತೇವೆ ಇವರಲ್ಲೂ. ಸಾಹಿತ್ಯ ಹಾಗೂ ಸಾಹಿತ್ಯೇತರ ಜಟುವಟಿಕೆಗಳೆಂಬ ದ್ವಿಮುಖವಿಲ್ಲ. ಇವರೆಲ್ಲ ವ್ಯಕ್ತಿತ್ವವೂ ಕಲಾತ್ಮಕತೆಯಿಂದ ಅವೃತವಾಗಿದೆ ಎಂಬುವುದನ್ನು ನಾವು ಇಲ್ಲಿ ಕಾಣಬಹುದು.