‘ರಂಗ ಅನ್ವೇಷಣೆ : ಪೀಟರ್ ಬ್ರೂಕ್’ನ ರಂಗಪ್ರಯೋಗಗಳು’ ಕೃತಿಯು ಕೆ.ವಿ ಅಕ್ಷರ ಅವರ ರಂಗಪ್ರಯೋಗ ವಿಚಾರಗಳ ಕುರಿತ ಲೇಖನಸಂಕಲನವಾಗಿದೆ. ಈ ಕೃತಿಯು ಪಾಶ್ಚಾತ್ಯ ದೇಶಗಳಲ್ಲಿನ ಇತ್ತೀಚಿನ ರಂಗ ಕಲ್ಪನೆ-ಸಾಧನೆಗಳನ್ನು ಸ್ಥೂಲವಾಗಿ ಪರಿಚಯಿಸಿಕೊಡುತ್ತದೆ. ಈಚಿನ ದಶಕಗಳಲ್ಲಿ ಪ್ರಸಿದ್ದನಾಗಿರುವ ಪೀಟರ್ ಬ್ರೂಕ್ ನ ಪ್ರಯೋಗಗಳನ್ನು ಕೇಂದ್ರವಾಗಿಟ್ಟುಕೊಂಡು ಅದರ ಹಿನ್ನೆಲೆಯ ವ್ಯಾಪ್ತಿಯನ್ನು ವಿವರಿಸುವ ಈ ಬರಹ, ಜತೆ ಜತೇಗೆ ಇಂಡಿಯಾದ ಈಚಿನ ರಂಗಭೂಮಿಯ ಕಡೆಗೆ ಕೂಡ ಗಮನ ಸೆಳೆಯುತ್ತದೆ.
ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ. ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...
READ MORE