‘ರಾಜಕೀಯದ ಬಡತನ’ ಡಾ. ಎಂ. ಚ೦ದ್ರ ಪೂಜಾರಿ ಅವರ ಲೇಖನ ಸಂಕಲನ. ಇಲ್ಲಿ ಸಮಾಜಶಾಸ್ತ್ರೀಯ ಚಿಂತನೆಗಳಿಂದ ಕೂಡಿರುವ ಲೇಖನಗಳಿವೆ. ಪ್ರತೀ ಲೇಖನಗಳು ಪ್ರಭುತ್ವ, ಪ್ರಜೆ, ಅಧಿಕಾರ, ಅಭಿವೃದ್ಧಿಯಂತಹ ಹಲವು ನೆಲೆಗಳಲ್ಲಿ ಸಂಚರಿಸುತ್ತ ಅವುಗಳಿಗಿರುವ ಪರಸ್ಪರ ಸಂಬಂಧಗಳ ಹುಡುಕಾಟಕ್ಕೆ ಹಚ್ಚುತ್ತವೆ. ದೇಶದ ಪ್ರಜೆ ನೆಮ್ಮದಿ ಯಿಂದಿದ್ದಾನೆಯೆ ? ನೆಮ್ಮದಿಯಿಂದಿರಲು ಎಂತಹ ಪರಿಸರ ಬೇಕು ? ನಮ್ಮನ್ನಾಳಲು' ಎಂತೆಂತಹ ಜನರು ಪ್ರಭುಗಳಾಗಿ ಬರುತ್ತಿದ್ದಾರೆ ? ಇಲ್ಲಿ ಯಾರ ಬಡತನ ಯಾರು ನಿವಾರಣೆ ಮಾಡುತ್ತಿದ್ದಾರೆ ? ಇವೆಲ್ಲ ಮಿಲಿಯನ್ ಡಾಲರ್ ಪ್ರಶ್ನೆಗಳು. ಅಧಿಕಾರ ಮತ್ತು ಕಾನೂನುಗಳನ್ನು ನಿಷ್ಕ್ರಿಯಗೊಳಿಸಬಲ್ಲ. ಅಥವಾ ದುರ್ಬಲಗೊಳಿಸಬಲ್ಲ ಸಮಾಜಘಾತಕ ಶಕ್ತಿಗಳ ಕೈ ದಿನೇ ದಿನೇ ಮೇಲಾಗುತ್ತಿದೆ. ಇಂಥಹ ಕಟುವಾಸ್ತವನ್ನು ಕುರಿತು ಈ ಕೃತಿ ನಮ್ಮ ಮುಂದಿಡುತ್ತದೆ.
ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿರುವ ಎಂ.ಚಂದ್ರಪೂಜಾರಿ ಅವರು ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಶೋಧನೆ: ಏನು? ಏಕೆ? ಹೇಗೆ?, ಸಮಾಜ ಸಂಶೋಧನೆ, ಸಂಶೋಧನ ಜವಾಬ್ದಾರಿ, ಸಂಶೋಧನ ಪ್ರಸ್ತಾವ, ದೇಶೀಯತೆ ನೆರಳಲ್ಲಿ ವಿಕೇಂದ್ರೀಕರಣ, ಜಂಟಿ ಅರಣ್ಯ ಯೋಜನೆ, ಅಭಿವೃದ್ಧಿ ಮತ್ತು ರಾಜಕೀಯ, ರಾಜಕೀಯದ ಬಡತನ, ಬಡತನ ಮತ್ತು ಪ್ರಜಾಪ್ರಭುತ್ವ- ಇವರ ಪ್ರಮುಖ ಕೃತಿಗಳು. ...
READ MORE