ಶಿವಾನಂದ ಟವಳಿ ಅವರ ‘ಪುನರ್ನವ ಭಾಗ-4’ ಕೃತಿಯು ಹಸಿರ ಕುರಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯು ಭೂಮಿ ಪ್ರತಿಷ್ಠಾನದ ಕನ್ನಡಿಯಾಗಿ ಬಿಂಬಿತವಾಗಿದೆ. ಪರಿಸರ ರಕ್ಷಣೆಯನ್ನು ಹೊತ್ತು ಜನರಿಗೂ ಅರಿವನ್ನು ತಿಳಿಸುವ ಕಾರ್ಯವನ್ನು ” ಭೂಮಿಯು ಎಲ್ಲರಿಗಾಗಿ ಎಲ್ಲರೂ ಭೂಮಿಗಾಗಿ ಅನ್ನುವಂತಹ ಧ್ಯೇಯವಾಕ್ಯದ ಮೂಲಕ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಬಿತ್ತುತ್ತಿದೆ. ಅಕ್ಷರ ಕ್ರಾಂತಿಯ ಜೊತೆಗೆ ವೃಕ್ಷ ಕ್ರಾಂತಿ, ನುಡಿ ಸೇವೆಯ ಜೊತೆಗೆ ನಾಡಿನ ಸೇವೆ ಅನ್ನುವಂತಹ ದೂರದೃಷ್ಠಿಯೊಂದಿಗೆ ನಿಸ್ವಾರ್ಥ ಹಾಗೂ ಪ್ರಮಾಣಿಕ ಸೇವೆಯ ಸಾಮಾಜಿಕ ಕಳಕಳಿಯುಳ್ಳ ಸಂಘಟನೆಯೇ ನಮ್ಮ ಸಾಮರ್ಥ್ಯ ಎನ್ನುತ್ತಾರೆ ಲೇಖಕ ಶಿವಾನಂಡ ಟವಳಿ. ಪುನರ್ನವ ಸಂಶೊಧನಾ ಗ್ರಂಥವು ಸಮಾಗಮ, ಅರಿವಿನ ಪಯಣ, ಹಸಿರು ಭೂಸಿರಿ, ಧರಣಿಮಂಡಲ, ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಿದೆ.
ಲೇಖಕ ಬಸುತನಯ (ಶಿವಾನಂದ ಟವಳಿ) ಧಾರವಾಡದಲ್ಲಿ ಅಧ್ಯಾಪಕರು. ಕೃತಿಗಳು: ಚೆಲುವ ಕನ್ನಡ ನಾಡು (ಮಕ್ಕಳ ಕವಿತೆಗಳು), ಬಹುರೂಪಿ (ಕವನ ಸಂಕಲನ) ...
READ MORE