`ಪ್ರೀತಿಗೊಂದು ಹೆಸರು ಇದು ‘ಝಿಪ್ಪಿ’ ಗ್ರಫಿ’ ಕೃತಿಯು ಶ್ರುತಿ ಜೈನ್ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ನಟ ರಾಜ್ ಬಿ. ಶೆಟ್ಟಿ ಅವರು, ‘ಶ್ರುತಿ ಜೈನ್ , ತನ್ನ ಒಡನಾಡಿ ಝಿಪ್ಪಿಯ ಬಗ್ಗೆ ಪುಸ್ತಕ ಬರೆಯಬೇಕೆಂದಾಗ ಅವರ ಪ್ರೀತಿಗೆ ಪ್ರಕಟಭಾವ ಕೊಡುವ ಪ್ರಯತ್ನ ಹೇಗಾಗಬಹುದೆಂಬ ಕುತೂಹಲದಲ್ಲಿದ್ದೆ. ಯಾಕೆಂದರೆ ಝಿಪ್ಪಿ ನನಗೂ ಒಂದೆರಡು ಭೇಟಿಯಲ್ಲಿ ಪರಿಚಿತಳು. ಅವಳ ಸಂಬಂಧವನ್ನು ಅಕ್ಷರಗಳಲ್ಲಿ ಬಂಧಿಸಲು ಸಾಧ್ಯವಾ ಎನ್ನುವುದೇ ನನಗಿದ್ದ ಪ್ರಶ್ನೆ. ಆದರೆ , ಶ್ರುತಿ ಬರೆದ ಬರವಣಿಗೆಯನ್ನು ಓದಿದಾಗ ಆ ಶಂಕೆ ನಿವಾರಣೆಯಾಯಿತು, ಮಕ್ಕಳಿಂದ ಹಿಡಿದು ವಯಸ್ಕ ಶ್ವಾನ ಪ್ರೇಮಿಗಳು ಕೂಡ ಸಂದೇಹವಿಲ್ಲದೇ ಓದಬಹುದಾದ, ಓದಿಸಿಕೊಂಡು ಹೋಗುವ ಬರವಣಿಗೆ ಇದಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಶ್ರುತಿ ಜೈನ್ ಮೂಲತಃ ಕಾರ್ಕಳದ ರೆಂಜಾಳ ಗ್ರಾಮದವರು. ನಟನೆ, ಬರವಣಿಗೆ, ಓದುವುದು ಹಾಗೂ ನೃತ್ಯ ಅವರ ಆಸಕ್ತಿ ಕ್ಷೇತ್ರಗಳು. ಪತ್ರಕರ್ತೆಯಾಗಿರುವ ಅವರು ನ್ಯೂಸ್ 18 ಕನ್ನಡ ವಾರ್ತಾವಾಚಕಿಯಾಗಿ ಕಾರ್ಯನಿರ್ವಹಿಸಿದ್ದು, ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಜಾಹೀರಾತು, ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕೃತಿಗಳು : ಝಿಪ್ಪಿ ಗ್ರಫಿ ...
READ MORE