ಲೇಖಕ ಅರವಿಂದ ಚೊಕ್ಕಾಡಿ ಅವರ ಕೃತಿ-ಪ್ರಶ್ನೋತ್ತರಗಳು: ಫೇಸ್ ಬುಕ್ ಮಾತುಕತೆ. ಲೇಖಕ ಎ.ಎಂ. ನರಹರಿ ಅವರು ಕೃತಿಗೆ ಬೆನ್ನುಡಿ ಬರೆದು ‘ಅರವಿಂದ ಚೊಕ್ಕಾಡಿ ಅವರ ಬರಹಗಳು ಸಾಮಾನ್ಯ ಲೇಖನಗಳಲ್ಲ; ಅವು ಚಿಂತನೆಗಳು. ಇಲ್ಲಿಯ ವಿಚಾರ ಪರ ಚಿಂತನೆಗಳು ಜಿಜ್ಞಾಸೆಗಳಿಗೆ ಉತ್ತರ ಹುಡುಕುತ್ತವೆ. ಚಾರಿತ್ರಿಕ ಮಾಹಿತಿ ಸಂಗ್ರಹಿಸುತ್ತವೆ. ಹೇಳಬೇಕಾದ ಮಾತನ್ನು ನೇರವಾಗಿ ಹೇಳುವ ದಿಟ್ಟತನ ಹೊಂದಿರುತ್ತವೆ. ನಿರ್ವಿಕಾರವಾಗಿ ಸತ್ಯ ಹೇಳುವ ತುಡಿತ ನಮ್ಮನ್ನು ತಟ್ಟುತ್ತದೆ ಎಂದು ಇಲ್ಲಿಯ ಬರಹಗಳನ್ನು ಪ್ರಶಂಸಿಸಿದ್ದಾರೆ.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MORE