ನಾಡಿನಾದ್ಯಂತ ವಿವಿಧ ಉದಯೋನ್ಮುಖ ಲೇಖಕರ ಕೃತಿ-ಪಿಸುದನಿ. ಮಕ್ಕಳ ಸಾಹಿತ್ಯದ ಪರಿಚಯಾತ್ಮಕ 22 ಲೇಖನಗಳ ಸಂಗ್ರಹ ‘ಪಿಸುದನಿ’. ರೆಕ್ಕೆ ಬಡಿವ ಚಿಟ್ಟೆಯ ಬೆಡಗು (ನಭಾ ಒಕ್ಕುಂದ), ಬದುಕ ಪ್ರೀತಿಸುವ ಕಾವ್ಯ (ಗಣೇಶ ಹೊಸ್ಮನೆ), ಮರೆಯಲ್ಲಿ ನಗುವ ಹುಡುಗಿ (ಸಿಂಧು ಹೆಗಡೆ), ಹೊಸ ರಸ್ತೆಗಳ ಹುಡುಕಾಟ (ಉಮೇಶ ನಾಯ್ಕ), ಕೈ ಬೀಸಿ ಕರೆವ ಕವಿತೆ (ಅಶೋಕ ಹಾಸ್ಯಗಾರ), ಬಿಂದು ಬಿಂದಿಗೆ ಪ್ರೀತಿ ಕನಸು (ಮಾನಸ ಹೆಗಡೆ), ಮಕ್ಕಳ ಕಣ್ಣಲ್ಲಿ ಹೊಳೆವ ನಕ್ಷತ್ರ (ಕಲ್ಪನಾ ಹೆಗಡೆ), ಖುಷಿ ಖುಷಿ ನೀಡುವ ಖುಷಿಯ ಬೀಜ (ತಮ್ಮಣ್ಣ ಬೀಗಾರ), ನಾನೂ ಉಯಿಲಿಗೆ ಸಹಿ ಹಾಕಿದೆ (ಯಮುನಾ ಗಾಂವ್ವರ್) ಮುಂತಾದ ಕೃತಿ ಪರಿಚಯ-ವಿಶ್ಲೇಷಣೆಯ ಬರೆಹ ಇಲ್ಲಿವೆ.
ಈ ಕೃತಿಯಲ್ಲಿರುವ 22 ಲೇಖನಗಳು ಕೇವಲ ಕೃತಿ ಪರಿಚಯಕ್ಕೆ ನಿಲ್ಲದೆ ಗಂಭೀರ ಮತ್ತು ಸೂಕ್ಷ್ಮ ವಿಶ್ಲೇಷನೆಯ ವಿಸ್ತಾರವನ್ನು ಪಡೆದುಕೊಂಡಿದೆ. ಅತ್ಯಂತ ಕಿರಿಯ ಕವಯತ್ರಿ ನಭಾಳಿಂದ ಮೊದಲ್ಗೊಂಡು ನಮ್ಮನ್ನಗಳಿದ ಹಿರಿಯ ಜೀವ ಜಿ.ಎಸ್ ಅವಧಾನಿ, ಬಿ.ಎ. ಸನದಿ, ವಿಡಂಬಾರಿಯವರವರೆಗೆ ಇಲ್ಲಿನ ಬರಹ ಚಾಚಿಕೊಂಡಿದೆ. ಪುಸ್ತಕದ ಕೊನೆಯಲ್ಲಿ ಉತ್ತರ ಕನ್ನಡದ ದಶಕದ ಕಾವ್ಯದ ಕುರಿತು ಕೂಡ ಮಹತ್ವದ ಚರ್ಚೆಯನ್ನೊಳಗೊಂಡ ಲೇಖನ ಈ ಪುಸ್ತಕದಲ್ಲಿದೆ. ಇವೆಲ್ಲವೂ ಸಾಹಿತ್ಯಕ್ಕೆ ಉತ್ತರ ಕನ್ನಡದ ಕೊಡುಗೆಯೇನು ಎನ್ನುವುದನ್ನು ದಾಖಲಿಸುವುದರಲ್ಲಿ ಅನುಮಾನಿವಿಲಲಾ ಎಂಬುದಾಗಿ ಪ್ರಕಾಶಕರು ಈ ಕೃತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಬಂಡಾಯ ಸಾಹಿತಿ ಡಾ. ಆರ್. ವಿ. ಭಂಡಾರಿ ಹಾಗೂ ಸುಬ್ಬಿ ದಂಪತಿಗಳ ಮಗಳಾಗಿ 1962 ರಲ್ಲಿ ಜನನ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿ ಈಗ ವಿಶ್ರಾಂತ ಜೀವನ. ಪುಸ್ತಕಗಳು: 'ಹರಿದ ಸ್ಕರ್ಟಿನ ಹುಡುಗಿ', 'ಕಡಲು ಕಳೆದಿದೆ', 'ಮೌನ ಗರ್ಭದ ಒಡಲು' (ಕವನ ಸಂಕಲನ), 'ನೀನುಂಟು ನಿನ್ನ ರೆಕ್ಕೆ ಉಂಟು' (ಸಂಪಾದಿತ ದಶಕದ ಮಹಿಳಾ ಕಾವ್ಯ), 'ಆಗೇರ ಮಹಿಳಾ ಸಂಸ್ಕೃತಿ' (ಸಾಹಿತ್ಯ ಅಕಾಡೆಮಿ ಪ್ರಕಟಣೆ), 'ಪಿಸು ದನಿ' (ಲೇಖನ ಸಂಕಲನ), 'ಗುಲಾಬಿ ಕಂಪಿನ ರಸ್ತೆ'(ಕಥಾ ...
READ MORE