ಪಯಣದ ಹಾದಿ

Author : ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ

Pages 133

₹ 100.00




Year of Publication: 2021

Synopsys

’ಪಯಣದ ಹಾದಿ’ ಕೃತಿಯು ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ ಅವರ ಮಾನವೀಯ ವಿಷಯಗಳ ಕುರಿತ ಲೇಖನಗಳ ಪುಸ್ತಕವಾಗಿದೆ. ಅದೆಷ್ಟೋ ಜನ ಜೀವನದ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿರುತ್ತಾರೆ. ಪತ್ರಿದಿನ ಒಂದಲ್ಲಾ ಒಂದು ರೀತಿ ಎದುರಾಗುವ ಸಮಸ್ಯೆಗಳಿಂದ ಜರ್ಜರಿತಗೊಂಡಿರುತ್ತಾರೆ. ಈ ಜೀವನ ಎಷ್ಟು ಕ್ರೂರಿ ಎಂದು ಸ್ವತಃ ಭಾವಿಸಿರುತ್ತಾರೆ. ಆತ್ಮಸ್ಥೈರ್ಯ, ಆತ್ಮವಿಶ್ವಾಸ ಕಳೆದುಕೊಂಡು ಜೀವನದ ಬಗ್ಗೆ ಪ್ರೀತಿಯೇ ಹೊಂದಿರುವುದಿಲ್ಲ. ಜೀವನದಲ್ಲಿ ಸಾಧನೆ ಮಾಡಬೇಕೆಂಬ ಆಲೋಚನೆ, ಆಸೆ ಇದ್ದರೂ, ಸಮಸ್ಯೆಗಳಿಂದ ಗುರಿಯನ್ನೇ ಕೈ ಬಿಡುವ ಹಂತಕ್ಕೆ ಹೋಗುತ್ತಾರೆ. ಹೀಗೆ ಅವಮಾನ, ಅನುಮಾನಗಳಿಂದ ಪ್ರತಿದಿನವೂ ಕಣ್ಣಿರಾಕುವ ಅದೆಷ್ಟೊ ನೊಂದ ಜೀವಗಳಿಗೆ ತುಸು ಧೈರ್ಯ ತುಂಬಿ, ಬದುಕಿನ ಬಗ್ಗೆ ಭರವಸೆ ಮೂಡಿಸುವ ಕೃತಿ ಇದಾಗಿದೆ ಎನ್ನುತ್ತಾರೆ ಲೇಖಕ ಗಿರೀಶ್.

About the Author

ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ

ದೇವಲಪಲ್ಲಿ ಎನ್. ಗಿರೀಶ್ ರೆಡ್ಡಿ ಅವರು ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದೇವಲಪಲ್ಲಿ ಗ್ರಾಮದವರು. ಬೆಂಗಳೂರಿನ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮೈಸೂರಿನ ಮುಕ್ತ ವಿ.ವಿಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೋಮ ಪದವಿಯನ್ನು ಪಡೆದಿದ್ದಾರೆ. ಕೆಲ ಕಾಲ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯೊಂದರಲ್ಲಿ ತರಬೇತುದಾರರಾಗಿದ್ದಾರೆ. ಕೃತಿಗಳು: ಪಯಣದ ಹಾದಿ ...

READ MORE

Related Books