ಹಿರಿಯ ಲೇಖಕ ಲಕ್ಷಣ್ ತೆಲಗಾವಿ ಅವರ ‘ಪರ್ಜನ್ಯ ಯಾಗಾಚರಣೆ ಮತ್ತು ಬರನಿವಾರಣೆ’ ಕೃತಿಯು ಅಧ್ಯಯನ ಗ್ರಂಥವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಎನ್.ಎಸ್. ಮಹಂತೇಶ ಅವರು, ಪ್ರಸ್ತುತ ಕೃತಿಯು ಲಕ್ಷಣ್ ತೆಲಗಾವಿ ಅವರ ಹಿಂದಿನ ಇತರೆ ಕೃತಿಗಳಿಗಿಂತ ತೀರಾ ಭಿನ್ನ ಸ್ವರೂಪವಾದದ್ದು ಮಾತ್ರವಲ್ಲ, ಅವರ ಬಹುಮುಖ ವಿದ್ವತ್ತಿಗೆ ಸಾಕ್ಷಿಯಂತಿದೆ. ಭಾರತೀಯ ಪರಂಪರೆಯ ವೈದಿಕಯಾಗ, ಜಪ, ಮಂತ್ರಗಳ, ಮುಖೇನ ಪ್ರಕೃತಿ ಶಕ್ತಿಗಳನ್ನು ಒಲಿಸಿಕೊಂಡು ಮಳೆ ಬರಿಸುವ ಕ್ರಮ ದೇಸಿಯ ವಿಜ್ಞಾನಕ್ಕೊಂದು ನೈಜ್ಯ ಉದಾಹರಣೆಯೆಂಬುದನ್ನು ಅವರ ಕೃತಿ ಸಾದರಪಡಿಸುತ್ತದೆ. ತೆಲಗಾವಿ ಅವರು ಚಿತ್ರದುರ್ಗ ಸೇರಿದಂತೆ ಕರ್ನಾಟಕದಲ್ಲಿ ಪರ್ಜನ್ಯಯಾಗವನ್ನು ಆಚರಿಸಿ ಬರನಿವಾರಣೆ ಮಾಡಿರುವ ಸಂದರ್ಭಗಳನ್ನು ಸೂಕ್ತ ಆಧಾರಗಳ ಸಹಿತ ಇಲ್ಲಿ ದಾಖಲಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಇತಿಹಾಸಜ್ಞ, ಸಂಶೋಧಕ ಲಕ್ಷ್ಮಣ್ ತೆಲಗಾವಿಯವರು 1947 ಜನವರಿ 01 ಹುಟ್ಟಿದ್ದು ಚಿತ್ರದುರ್ಗದಲ್ಲಿ. ಹಲವಾರು ಐತಿಹಾಸಿಕ, ಸಾಮಾಜಿಕ ಚಳುವಳಿಗಳ ಗ್ರಂಥಗಳ ರಚಿಸಿ ಮತ್ತು ಪ್ರಕಟಿಸಿದ್ಧಾರೆ. ಚಿತ್ರದುರ್ಗ ದರ್ಶಿನಿ, ಇದು ಚಿತ್ರದುರ್ಗ, ಚಿತ್ರದುರ್ಗ ಹ್ಯಾನ್ ಇನ್‌ಸೈಟ್, ಬುರುಗು (ಚಿಂತನ ಲೇಖನಗಳು), ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ದಲಿತ ಚಳುವಳಿಗಳು, ಮೌರ್ಯ ಮತ್ತು ಶಾತವಾಹನಯುಗ, ಚಿತ್ರದುರ್ಗಜಿಲ್ಲಾ ಇತಿಹಾಸ, ಚಿತ್ರದುರ್ಗ ನಾಯಕ ಅರಸರು, ವಿಜಯನಗರಕಾಲದ ರಾಮಾನುಜಕೂಟಗಳು, ಎಪ್ಪತ್ತೇಳು ಪಾಳಯಗಾರರು, ಚಿತ್ರದುರ್ಗದ ಒನಕೆ ಓಬವ್ವ, ಚಾರಿತ್ರಿಕ ವಿವೇಚನೆ, ದೊಡ್ಡೇರಿಕದನ ಮುಂತಾದ ಕೃತಿಗಳನ್ನು ಸ್ವಾತಿ ಪ್ರಕಾಶನ, ವಾಲ್ಮೀಕಿ ಸಾಹಿತ್ಯ ಸಂಪದ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ...
READ MORE