ಲೇಖಕ ಡಾ. ನಿರಂಜನ ವಾನಳ್ಳಿ ಅವರ ಪರಿಸರ ಸಂಬಂಧಿ ಕೃತಿ ʼಪರಿಸರ ಪತ್ರಿಕೋದ್ಯಮʼ. ಪುಸ್ತಕವು ಪ್ರಕೃತಿಯ ಸಹಜವಾದ ಸೌಂದರ್ಯ, ಒಂದೊಂದು ನಾಡಿನಲ್ಲಿರುವ ಪರಿಸರದ ಚಿತ್ರಣ ಹಾಗೂ ಪರಿಸರದ ಕಾಳಜಿಯ ಬಗ್ಗೆ ಒಬ್ಬ ಪತ್ರಕರ್ತನಿಗಿರಬೇಕಾದ ಅರಿವಿನ ಬಗ್ಗೆ ವಿವರಣೆ ನೀಡುತ್ತದೆ. ಪರಿಸರ ಎಂದಾಗ ಮಲೆನಾಡು, ಬಯಲು ಸೀಮೆ, ಕರಾವಳಿ, ಹಾಗೂ ಬೆಂಗಳೂರಿಗರಿಗೆ ಅವರವರ ನಾಡಿನ ವೈಶಿಷ್ಟ್ಯತೆ ಅನುಗುಣವಾಗಿ ಒಂದೊಂದು ರೀತಿಯಲ್ಲಿ ಅರ್ಥವಾಗುತ್ತದೆ. ಹಾಗಾಗಿ ಪರಿಸರವು ಒಂದು ವಿಶಾಲ ವ್ಯಾಪ್ತಿಯುಳ್ಳ ಪದ. ಪ್ರಾಕೃತಿಕ ಪರಿಸರ ಮಾತ್ರವಲ್ಲದೆ ಶೈಕ್ಷಣಿಕ ಪರಿಸರ, ಧಾರ್ಮಿಕ ಪರಿಸರಗಳೂ ಇವೆ. ಆದ್ರೆ, ಭೂಮಿಯ ಫಲವತ್ತಾದ ಪದರ ಮಾನವನ ತಪ್ಪುಗಳಿಂದಾಗಿ ತೊಳೆದು ಹೋಗುತ್ತಿರುವುದು ಜಾಗತಿಕ ಸಮಸ್ಯೆಗಳಲ್ಲಿ ಒಂದು. ಮರಕಡಿತ, ಗಣಿಗಾರಿಕೆಗಳು ಭೂಸವಳಿಕೆಗೆ ಕಾರಣಾವಾಗುತ್ತಿದ್ದು, ಅದರ ಬಗ್ಗೆ ಪತ್ರಕರ್ತನಿಗಿರಬೇಕಾದ ಅರಿವಿನ ಬಗ್ಗೆ ಈ ಪುಸ್ತಕವು ಹೇಳುತ್ತದೆ.
ನಿರಂಜನ ವಾನಳ್ಳಿ ಹುಟ್ಟಿದ್ದು(1965) ಉತ್ತರ ಕನ್ನಡ ಜಿಲ್ಲೆಯ 'ವಾನಳ್ಳಿ'ಯಲ್ಲಿ. ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಕವಿ, ವಿಮರ್ಶಕ, ಸಂಶೋಧಕ, ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ. ಪ್ರಾಧ್ಯಾಪಕ. ಸದಾ ಒಂದಲ್ಲೊಂದು ಪತ್ರಿಕೆ, ನಿಯತಕಾಲಿಕಗಳಲ್ಲಿ ವೈವಿಧ್ಯಮಯ ಬರಹಗಳನ್ನು ಪ್ರಕಟಿಸುತ್ತಿದ್ದರು. ದ.ಕ.ಜಿಲ್ಲೆಯ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಗಿದ್ದರು. ಪ್ರಸ್ತುತ ಸಂಗೀತ ವಿಶ್ವವಿದ್ಯಾನಿಲಯದ ಕುಲಸಚಿವರು. ನಿಯತಕಾಲಿಕ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ, ಎಲ್ಲರಿಗೂ ಬೇಕು ಸಂವಹನದ ಕಲೆ, ಪತ್ರಿಕಾ ಮಂಡಳಿ ಏನು? ಎತ್ತ? ಸೇರಿದಂತೆ 'ಒಂದು ಅಡಿ ಭೂಮಿ, ಬೊಗಸೆ ತುಂಬ ಪ್ರೀತಿ-ಕವನ ಸಂಕಲನ' ಇದು 31 ನೇ ಕೃತಿ. ಕಂಡಿದ್ದು ಕಾಡಿದ್ದು-ಇವರ ಅಂಕಣ ಬರೆಹ. ಪ್ರೀತಿಗೆಷ್ಟು ಮುಖಗಳು, ಹುಡುಕಾಟದ ಹೊತ್ತು, ಆ ಕ್ಷಣದ ...
READ MORE