ಓದುಗ ದೊರೆಯ ತೀರದ ನೆನಪುಗಳು

Author : ಯಶೋಮತಿ ರವಿ ಬೆಳಗೆರೆ

Pages 212

₹ 250.00




Year of Publication: 2023
Published by: ಯಶೋಮತಿ ರವಿ ಬೆಳಗೆರೆ
Address: ಯಶಸ್ವಿ, #19/16/1 2ನೇ ಅಡ್ಡರಸ್ತೆ, ಬಿಎಚ್‌ಇಎಲ್ 2ನೇ ಹಂತ, ರಾಘವೇಂದ್ರ ಬಡಾವಣೆ, ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಹತ್ತಿರ, ಪಟ್ಟಣಗೆರೆ, ರಾಜರಾಜೇಶ್ವರಿ ನಗರ, ಬೆಂಗಳೂರು -560 098
Phone: 9845556005

Synopsys

ಓದುಗ ದೊರೆಯ ತೀರದ ನೆನಪುಗಳು ಪುಸ್ತಕ ರವಿ ಬೆಳಗೆರೆಯವರ ಕುರಿತು ಓದುಗ ದೊರೆಗಳ ಲೇಖನಗಳ ಸಂಗ್ರಹ. ಕೇವಲ ಹದಿನಾರು ಪುಟಗಳ, ಬಣ್ಣಗಳಿಲ್ಲದ, ಕಪ್ಪು-ಬಿಳಿ ಪತ್ರಿಕೆಯ ಮೊದಲ ಪ್ರತಿಯನ್ನು ನಾಲ್ಕು ರುಪಾಯಿ ಕೊಟ್ಟು, ಕೊಂಡುಕೊಂಡ ಆ ಮೊದಲ ಓದುಗನಿಗೆ ನನ್ನ ನಮಸ್ಕಾರ. ಅದೃಷ್ಟ, ಕಾಲ, ಮುಹೂರ್ತ, ಪಂಚಾಂಗ, ವಾಸ್ತು-ಯಾವುದನ್ನೂ ನಂಬದ ನಾನು ಆ ಓದುಗನೆಂಬ ಅಗೋಚರ ದೊರೆಯನ್ನು ನಂಬಿದೆ. ಪತ್ರಿಕೆ ಆರಂಭಿಸಿದಾಗ ನನ್ನ ಕೈಲಿ ಹಣವಿರಲಿಲ್ಲ. ಯಾವತ್ತಿಗೂ ನಾನು ಜಾತಿ ನಂಬಿದವನಲ್ಲ. ನನ್ನ ಹಿಂದೆ ಅವತ್ತು crowd ಇರಲಿಲ್ಲ, ಇದ್ದುದು ಆತ್ಮವಿಶ್ವಾಸವೊಂದೇ. 'ನನ್ನ ಓದುಗನೊಂದಿಗೆ ನಾನು ಮಾತನಾಡುತ್ತೇನೆ. ಆತ ಕೇಳಿಸಿಕೊಳ್ಳುತ್ತಾನೆ. ನಾನು ಹೇಳುವ ಕಥೆ ನನ್ನದೂ ಇರಬಹುದು. ಆತನದೂ ಇರಬಹುದು. ಆದರೆ ಈ ಮಾತು ನಾನು ಬದುಕಿರುವಷ್ಟು ದಿನ ಜಾರಿಯಲ್ಲಿರುತ್ತದೆ' ಹಾಗಂತ ಅಂದುಕೊಂಡೇ ಪತ್ರಿಕೆ ಆರಂಭಿಸಿದೆ. ಓದುಗ ದೊರೆ ನನ್ನ ಅನಿಸಿಕೆ ಸುಳ್ಳು ಮಾಡಲಿಲ್ಲ.

About the Author

ಯಶೋಮತಿ ರವಿ ಬೆಳಗೆರೆ

ಯಶೋಮತಿ ರವಿ ಬೆಳಗೆರೆ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕಸಾರಂಗಿ ಗ್ರಾಮದವರು. ಬಿಕಾಮ್, ಇಂಟರ್ನ್ಯಾಷನಲ್ ಗ್ರಾಜುಯೇಟ್ ಡಿಪ್ಲೊಮೋ ಇನ್ ಕೌನ್ಸಿಲಿಂಗ್ ಸ್ಕಿಲ್ಸ್,(IGDCS), ಡಿಪ್ಲೊಮೋ ಇನ್ ಬೊಟಿಕ್ ಮ್ಯಾನೇಜ್ ಮೆಂಟ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಅಕ್ಷರ ವಿನ್ಯಾಸಕಿ, ಪುಟ ವಿನ್ಯಾಸಕಿ, ಅಂಕಣಕಾರ್ತಿ, ಪ್ರಕಾಶಕಿ, ಲೇಖಕಿ, ರವಿ ಬೆಳಗೆರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕಿ ಹಾಗೂ ಅನಂತ ನೋಟ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಅಕ್ಷರ ವಿನ್ಯಾಸಕಿಯಾಗಿ ಆರಂಭಗೊಂಡ ಪತ್ರಿಕೋದ್ಯಮದ ಒಡನಾಟ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆಯಾಗಿ, ವ್ಯವಸ್ಥಾಪಕ ನಿರ್ದೇಶಕಿಯಾಗಿ, ಓ ಮನಸೇ ಮ್ಯಾಗಝೀನಿನ ಹಾಗೂ ಭಾವನಾ ಪ್ರಕಾಶನದ ...

READ MORE

Related Books