ಒಂದೊಳ್ಳೆ ಮಾತು

Author : ರೂಪಾ ಗುರುರಾಜ್

Pages 184

₹ 250.00




Year of Publication: 2022
Published by: ವಿಶ್ವವಾಣಿ ಪುಸ್ತಕ
Address: #1687, ನಿಸರ್ಗ ಸೆರೆನಿಟಿ, ಕಾಂಪ್ಲೆಕ್ಸ್‌ ರಸ್ತೆ, ಬಿಇಎಂಎಲ್‌ ಬಡಾವಣೆ, 5ನೇ ಹಂತ ರಾಜರಾಜೇಶ್ವರಿ ನಗರ, ಬೆಂಗಳೂರು- 560098
Phone: 8431007267

Synopsys

ಲೇಖಕಿ ರೂಪಾ ಗುರುರಾಜ್ ಅವರ ಅಂಕಣ ಬರಹಗಳ ಸಂಕಲನ ʻಒಂದೊಳ್ಳೆ ಮಾತುʼ. ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೈನಂದಿನ ಅಂಕಣಗಳನ್ನು ಇಲ್ಲಿ ಒಟ್ಟುಗೂಡಿಸಿ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರು, “ಈ ರೀತಿಯ ಅಂಕಣವನ್ನು ಬರೆಯುವುದು, ಪೊರೆಯುವುದು ಸುಲಭವಲ್ಲ. ಪ್ರತಿದಿನವೂ ಹೊಸ ಹೊಸ ವಿಚಾರ, ಕತೆ, ಪ್ರಸಂಗ, ದೃಷ್ಟಾಂತ, ಸಂಗತಿಗಳನ್ನು ಹೇಳುವುದು ಸವಾಲೇ ಸರಿ. ಅಲ್ಲದೇ ಆ ದಿನದ ವಿಷಯಕ್ಕೆ ಹೊಂದಾಣಿಕೆಯಾಗುವ ಪ್ರಸಂಗವನ್ನು ಜೋಡಿಸುವುದು ಸಹ. ಇದಕ್ಕೆ ಸಾಕಷ್ಟು ಅಧ್ಯಯನ, ಚರ್ಚೆ, ಸಂವಾದ, ಓದು ಅಗತ್ಯ. ಇದನ್ನು ಒಂದು ವ್ರತದಂತೆ ರೂಪಾ ಮಾಡುತ್ತಾ ಬಂದಿದ್ದಾರೆ. ಬೆಳಗ್ಗೆ ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ, ಅಯಾಚಿತವಾಗಿ 'ಒಂದೊಳ್ಳೆ ಮಾತು' ಅಂಕಣದತ್ತ ದೃಷ್ಟಿ ಹೊರಳುವ ಹಾಗೆ ಮಾಡಿದ್ದಾರೆ. ಇದು ಆ ಅಂಕಣವನ್ನು ಗೆಲ್ಲಿಸಿದ ರೂಪಾ ಅವರ ಸಾಧನೆಯೇ. ಈ ಅಂಕಣದಿಂದ ಅನೇಕರಿಗೆ ಪ್ರೇರಣೆ, ನೆಮ್ಮದಿ, ಸಮಾಧಾನ, ಸಂತಸ, ಸಾಂತ್ವನ ಸಿಕ್ಕಿದೆ. ಬೇಸರದಲ್ಲಿದ್ದವರಿಗೆ, ಮೂಡು ಕೆಡಿಸಿಕೊಂಡವರಿಗೆ ಒಂದು ಹಿಡಿ ಸಮಾಧಾನವನ್ನು ನೀಡಿದೆ. ಖಿನ್ನಮನಸ್ಕರಾದವರ ಮುಖದಲ್ಲಿ ಮಂದಹಾಸವನ್ನು ಮೂಡಿಸಿದೆ. ಈ ಬದುಕೇ ಇಷ್ಟು ಎಂದು ಹತಾಶರಾದವರಿಗೆ ಭರವಸೆಯ ಬದುಕಿನ ಬದುವನ್ನು ತೋರಿಸಿದೆ. ಇವ್ಯಾವವೂ ಇಲ್ಲದ ಓದುಗರಿಗೆ ಓದಿನ ಸಹಜ ಸುಖವನ್ನು ನೀಡಿದೆ. ಒಂದು ಅಂಕಣದ ಸಾರ್ಥಕ್ಯ ಇದೇ ಅಲ್ಲವೇ?” ಎಂದು ಹೇಳಿದ್ದಾರೆ.

About the Author

ರೂಪಾ ಗುರುರಾಜ್

ರೂಪಾ ಗುರುರಾಜ್ ಅವರು ಸಂವಹನ-ಲೇಖನ ಮತ್ತಿತರ ಸೃಜನಶೀಲ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ರೇಡಿಯೊ ಮತ್ತು ಸಂವಹನ, ಸ್ಕ್ರಿಪ್ಟ್‌ ಮತ್ತು ಸೃಜನಾತ್ಮಕ ಬರಹ, ಕಂಠದಾನ, ಕಾರ್ಯಕ್ರಮ ನಿರೂಪಣೆ ಮೊದಲಾದ ಹತ್ತು ಹಲವು ರಂಗಗಳಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಡಿ ಚಂದನ ಮತ್ತು ಎಫ್‌ಎಂ ರೇನ್‌ಬೋ, ನಮ್ ರೇಡಿಯೋ ಜತೆ ಹಲವಾರು ವರ್ಷ ಕೆಲಸ ಮಾಡಿದ್ದಾರೆ. ಸಾಕಷ್ಟು ರೇಡಿಯೋ ಹಾಗೂ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಅವರ ಕಂಠಸಿರಿಯ ಸ್ಪರ್ಶವಿದೆ. ನಾನಾ ರೀತಿಯ 500ಕ್ಕೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ. ಉಡುಪು ಮತ್ತು ...

READ MORE

Related Books