ಸ್ವಾನುಭವದ ಸನ್ನಿವೇಶಗಳು ಇಲ್ಲಿಯ ಒಂದೇ ಚಾನ್ಸ್ ಸಂಕಲನದ ಸಾಮಗ್ರಿ. ನಾಗರಾಜ ಮುಕಾರಿ (ಚಿರಾಭಿ) ಈ ಕೃತಿಯ ಲೇಖಕರು. ಜೀವನ ಹಿಮ್ಮುಖವಾಗಿ ಚಲಿಸದು. ಆದ್ದರಿಂದ, ತಮ್ಮ ಜೀವನದಲ್ಲಿಯ ಪ್ರತಿ ಕ್ಷಣವೂ ಮಹತ್ವದ್ದು, ಹಿಂತಿರುಗಿ ಬರಲಾರದ್ದು. ಒಂದೇ ಚಾನ್ಸ್ ಎನ್ನುವ ಮೂಲಕ ತಾವು ಅನುಭವಿಸುವ, ಎದುರಿಸುವ, ಸ್ಪಂದಿಸುವ ಪ್ರತಿ ಕ್ಷಣವನ್ನು ತಮಗೆ ಸಿಕ್ಕ ಅವಕಾಶ ಎಂದೇ ತಿಳಿದು ಬರವಣಿಗೆಯನ್ನೂ ಸಹ ಲೇಖಕರು ಗಂಭೀರವಾಗಿ ತೆಗೆದುಕೊಂಡು ಹೋಗಿದ್ದರಿಂದ ಇಲ್ಲಿಯ ಸ್ವಾನುಭವಗಳು ಸಾರ್ವತ್ರಿಕತೆಯನ್ನು ಪಡೆದಿವೆ. ಅನುಭವಗಳ ನಿವೇದನೆಯಲ್ಲಿ ಕಥೆಯ ನಿರೂಪಣೆ ಇದೆ. ಭಾಷೆಯೂ ಸರಳವಾಗಿದೆ. ನುಡಿಗಟ್ಟುಗ:ಳು ಬಳಕೆಯಾಗಿದ್ದರಿಂದ, ಬರವಣಿಗೆಯು ಓದಿಸಿಕೊಂಡು ಹೋಗುತ್ತದೆ. ಡೆನ್ಮಾರ್ಕನ ಹುಡುಗಿಯ ಜೊತೆ ಒಂದು ಸಂಜೆ, ಬಂದರೆ ಗುಡ್ಡ, ಹೋದರೆ ಹಗ್ಗ, ನಾವ್ಯಾರು ದೇವರ ಮಕ್ಕಳಲ್ಲ ಮುಂತಾದ ಶೀರ್ಷಿಕೆಯ ಸ್ವಾನುಭವಗಳು ಸರಳ ನಿರೂಪಣೆಯ ದೃಷ್ಟಿಯಿಂದ ಗಮನ ಸೆಳೆಯುತ್ತವೆ.
ನಾಗರಾಜ ಮುಕಾರಿ (ಚಿರಾಭಿ) ಲಾಸ್ಟ್ ಬುಕ್, ಒಂದೇ ಚಾನ್ಸ್-ಇವರ ಕೃತಿ. ರಿಡೂ ಕನ್ನಡದಲ್ಲಿ ಅಂಕಣಗಾರರು. ...
READ MORE