ಒಡಲ ಖಾಲಿಪುಟ

Author : ಕಾವೇರಿ ಎಸ್. ಎನ್.

Pages 152

₹ 120.00




Published by: ಪ್ರಜೋದಯ ಪ್ರಕಾಶನ
Address: ಗಂಧದ ಕೋಠಿ ಹಿಂಭಾಗ 2ನೇ ಕ್ರಾಸ್, ಕೆ.ಆರ್ ಪುರ, ಹಾಸನ-573201
Phone: 87922 76742

Synopsys

ಒಡಲ ಖಾಲಿ ಪುಟ ಕಾವೇರಿ ಎಸ್. ಎನ್. ಅವರ ಎರಡನೇ ಕೃತಿಯಾಗಿದೆ. ಲೇಖನಗಳ ಸಂಗ್ರಹ ಇದಾಗಿದ್ದರೂ ಬಾಲ್ಯದ ನೆನಪುಗಳ ಮೂಲಕ ಪ್ರಬಂಧದ ಗುಣವನ್ನು ಪಡೆದುಕೊಂಡಿರುವ ಹಲವು ಹೃದಯಸ್ಪರ್ಶಿ ಬರಹಗಳು ಈ ಕೃತಿಯಲ್ಲಿವೆ.  ಬರಹಗಳ ಗುಣಗಳಿಗೆ ತಕ್ಕಂತೆ ಲೇಖಕಿ ನಾಲ್ಕು ಭಾಗಗಳನ್ನು ಮಾಡಿರುವುದು ಓದುಗರಿಗೆ ಅನುಕೂಲವಾಗಿದೆ. ಮೊದಲ ಭಾಗದಲ್ಲಿ ತನ್ನ ಬಾಲ್ಯ ಮತ್ತು ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮೇರಿ ಟೀಚರ್ ಮತ್ತು ಇಂಗ್ಲಿಷ್ ಎಂಬ ಮಾಯಾಂಗನೆ, ತಮಗೆ ಅಕ್ಷರ ಕಲಿಸಿದ ಹಿರಿಯರ ಆದ್ರ್ರ ನೆನಪು, ಬಾಲ್ಯದ ತುಂಟತನಗಳು, ಮದುವೆ ಲೋಕ ಇವೆಲ್ಲವನ್ನು ಈ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಈ ಲೇಖನಗಳಿಗೆ ಕಥನ ಗುಣವಿದೆ.  ಎಲ್ಲರ ಬದುಕಿನ ಅನುಭವವೂ ಆಗಬಹುದಾದ ನೆನಪುಗಳು ನಮ್ಮನ್ನು ಕಾಡುತ್ತವೆ. ಎರಡನೆ ಅಧ್ಯಾಯವನ್ನು ವಿಚಾರಗಳಿಗೆ ಮೀಸಲಿಟ್ಟಿದ್ದಾರೆ. ದೇಶವನ್ನು ಕಾಡುವ ನರಹತ್ಯಗಳು, ಮಾಧ್ಯಮ ಮಹಿಳೆ ನಡುವಿನ ವಿಚಾರಗಳು, ಧಾರ್ಮಿಕ ಮನಸ್ಸಿನ ಮೈಲಿಗೆ ಎಂದು ಲೇಖಕಿ ಭಾವಿಸುವ ಮುಟ್ಟು, ರೈತರನ್ನು ನೋಡುವ ಕ್ರಮ, ಶಿಕ್ಷಣ, ಸಮಾಜಿ ಮೊದಲಾದ ವಿಷಯಗಳನ್ನು ಈ ಭಾಗದಲ್ಲಿ ಚರ್ಚಿಸುತ್ತಾರೆ. ಮೂರನೇ ಅಧ್ಯಾಯವನ್ನು ಅಸಂಗತ ಲಹರಿಯೆಂದು ಲೇಖಕಿ ಕರೆಯುತ್ತಾರೆ. ಬದುಕು, ಅಧ್ಯಾತ್ಮ, ಮೂರ್ತ ಅಮೂರ್ತ ಭಾವನೆಗಳು, ವಿಧಿ ವಿಲಾಸಗಳೆಲ್ಲ ಈ ಅಸಂಗತ ಲಹರಿಯಲ್ಲಿ ಹರಿಯುತ್ತದೆ. ನಾಲ್ಕನೇ ಅಧ್ಯಾಯ ಪ್ರೇಮ ನಿವೇದನೆಗಳಿಗೆ ಮೀಸಲಾಗಿವೆ. ಈ ಕೃತಿಯಲ್ಲಿ ಒಟ್ಟು 40 ಬರಹಗಳಿವೆ.

Related Books