'ನ್ಯಾಯಗಳಲ್ಲಿ ಸ್ವಾತಂತ್ಯ್ರ ಹೋರಾಟ’ಎನ್.ಪಿ.ಶಂಕರನಾರಾಯಣ ರಾವ್ ಅವರ ಲೇಖನಗಳಾಗಿವೆ. ತಾಯ್ಕಾಡಿನ ಬಿಡುಗಡೆಗಾಗಿ ಹೋರಾಡಿ ದೇಶಪ್ರೆಮವನ್ನು ಮೆರೆದ ಅಪರಾಧಕ್ಕಾಗಿ ರಾಜಕೀಯ ಮೊಕದ್ದಮೆಗಳನ್ನು ಎದುರಿಸಿದ, ನೇಣುಗಂಬಕ್ಕೂ ದೇಹವನ್ನೊಡ್ಡಿದ ಕೆಲವು ಅಮರ ಪ್ರತಿಭೆಗಳ ಸಾಹಸ ಗಾಥೆಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...
READ MOREತಾಯ್ಯಾಡಿನ ಬಿಡುಗಡೆಗಾಗಿ ಹೋರಾಡಿ ದೇಶಪ್ರೇಮವನ್ನು ಮೆರೆದ ''ಅಪರಾಧ''ಕ್ಕಾಗಿ ರಾಜಕೀಯ ಮೊಕದ್ದಮೆಗಳನ್ನು ಎದುರಿಸಿದ, ನೇಣುಗಂಬಕ್ಕೂ ದೇಹವನ್ನೊಡ್ಡಿದ ಕೆಲವು ಅಮರ ಪ್ರತಿಭೆಗಳ ಸಾಹಸ ಗಾಥೆ ಇಲ್ಲಿದೆ. ಕಾನೂನಿನ ಬಲವುಳ್ಳ ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯ ಚಿತ್ರಣ, ರಾಷ್ಟ್ರನಾಯಕರ ಉಜ್ವಲ ದೇಶಾಭಿಮಾನ, ಮಾರಕಾಸ್ತ್ರಗಳಿಗಿಂತಲೂ ಯಶಸ್ವಿಯಾಗಿ ಬಳಸಿಕೊಂಡ ಪಿತೂರಿ ಖಟ್ಟೆಗಳು, ಇವನ್ನೆಲ್ಲ ಹತ್ತಿರದಿಂದ ಕಂಡಿರುವ ಸ್ವಾತಂತ್ರ್ಯ ಪ್ರೇಮಿ ಲೇಖಕರು ಆ ಬಗ್ಗೆ ಮನಮುಟ್ಟುವಂತೆ ವಿವರಿಸಿದ್ದಾರೆ.
ಹೊಸತು-2002-ಜನವರಿ