ಮೇಟಿ ಮಲ್ಲಿಕಾರ್ಜುನ ಅವರ ‘ನುಡಿಯರಿಮೆ’ ಕೃತಿಯು ಲೇಖನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಓ. ಎಲ್. ನಾಗಭೂಷಣ ಸ್ವಾಮಿ ಅವರು, ‘ನುಡಿಯ ತಿಳಿವಳಿಕೆ, ಕನ್ನಡ ತಿಳಿವಳಿಕೆ, ನುಡಿ ತತ್ವ, ಜಾಮ್ಸ್ ಕಿಯ ವಿಚಾರಗಳು, ನುಡಿ ರಾಜಕಾರಣ, ನುಡಿಯ ಬಗ್ಗೆ ಎಲ್ಲರೂ ಸಹಮತ ತೋರುವಂಥ ವಿಚಾರ ಮಂಡನೆ ಸಾಧ್ಯವೇ ಇಲ್ಲ. ನುಡಿಯರಿವು ಬೆಳೆದ ರೀತಿಯಲ್ಲಿ ಹುಟ್ಟಿದ ವಾಗ್ವಾದಗಳನ್ನು ಯುದ್ಧಗಳಿಗೆ ಹೋಲಿಸಿ ಆಲನ್ ಹ್ಯಾರಿಸ್ ಬರೆದ ಅಂಗ್ವಸ್ಟಿಕ್ ವಾರ್‍ಸ್ ಎಂಬ ಪುಸ್ತಕ ಪ್ರಸಿದ್ದವಾಗಿದೆ. ಮುಖ್ಯವಾಗಿ ಜಾಮ್ಮಿ ಮಂಡಿಸಿದ ಸಿದ್ದಾಂತಗಳಿಗೆ ಬಂದ ವಿರೋಧ ಹಾಗೂ ಇಪ್ಪತ್ತನೆಯ ಶತಮಾನದ ನುಡಿತತ್ವ ಚಿಂತನೆಯ ಬೆಳವಣಿಗೆಯಲ್ಲಿ ನಡೆದ ಕಾದಾಟಗಳನ್ನು ಅರಿಯಲು ಆಸಕ್ತರು ಈ ಪುಸ್ತಕವನ್ನು ನೋದಬಹುದು ಎಂದಿದ್ದಾರೆ. ಇನ್ನೂ ಇಂಗ್ಲಿಷ್ ನುಡಿಯನ್ನು ಅರಿವಿನ ಭಾಷೆ, ತಿಳಿವಳಿಕೆಯ ಭಾಷೆ ಎಂದು ಯಾಕೆ ನೋಡಬೇಕು? ನುಡಿಯು ಮನುಷ್ಯನ ಒಳ ಕಸುವು ಆಗಿರುವಾಗ, ಸಮೂಹವೊಂದು ರೂಪಿಸಿಕೊಂಡ ತಿಳಿವಳಿಕೆಯನ್ನು ನೆಚ್ಚಬೇಕಲ್ಲದೆ ‘ಹೊರ’ ನುಡಿಯ ’ಹೊರ ತಿಳಿವಳಿಕೆ ಶ್ರೇಷ್ಠವೆಂದು ಮನ್ನಣೆ ಕೊಡುವುದು ನಮ್ಮ ನುಡಿಯನ್ನು ಕುಗ್ಗಿಸುವ, ’ಹೊರ’ ಆಳ್ವಿಕೆಗೆ ನಮ್ಮನ್ನು ಒಗ್ಗಿಸಿಕೊಳ್ಳುವ ಕೆಲಸವಲ್ಲವೇ ಎಂಬ ನಿಷ್ಠುರವಾದ ಪ್ರಶ್ನೆಗಳೂ ಮೂಡುತ್ತವೆ’ ಎಂದಿದ್ದಾರೆ.
ಶಿವಮೊಗ್ಗಾದ ಸಹ್ಯಾದ್ರಿ ಆರ್ಟ್ಸ್ ಕಾಲೇಜಿನ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಮೇಟಿ ಮಲ್ಲಿಕಾರ್ಜುನ ಅವರು ನುಡಿ ಚಿಂತಕರೆನಿಸಿಕೊಂಡಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತೆಂಕಣದ ನುಡಿಗಳು ಮತ್ತು ಇಂಗ್ಲಿಶ್, ಕರ್ನಾಟಕ ಸಬಾಲ್ಟ್ರನ್ ಓದು ಸಂಪುಟಗಳು, ಕೆವೈಎನ್ ನಾಟಕಗಳ ಓದು ‘ಆಟ-ನೋಟ’ ಅವರ ಸಂಪಾದಿತ ಕೃತಿಗಳು. ...
READ MORE