‘ನೂರೆಂಟು ಮಾತು-5’ ಕೃತಿಯು ವಿಶ್ವೇಶ್ವರ ಭಟ್ ಅವರ ಲೇಖನಗಳ ಸಂಕಲನವಾಗಿದೆ. ಒಂದು ಹನಿ ಕಣ್ಣೀರು ತೊಟ್ಟಿಕ್ಕಲು ಹೃದಯದಲ್ಲಿ ಒಂದಷ್ಟು ಸಂಕಟ, ನೋವು, ವಿಷಾದ ಹಾಗೂ ಯಾತನೆ ಹೆಪ್ಪುಗಟ್ಟಬೇಕು. ನೋವಿನ ಮಂಜುಗಡ್ಡೆ ಬಿಸಿಯಾದಾಗಲೇ ದು ಮೆಲ್ಲನೆ ಕರಗಲಾರಂಭಿಸುತ್ತದೆ. ಅದನ್ನು ಕಣ್ಣೀರು ಅಂತ ಅನ್ನಿ. ಒಂದೇ ಎನಿಸಿದರೂ ಅದು ಹಿಡಿದಿಟ್ಟುಕೊಳ್ಳುವ ಭಾವ ಮಾತ್ರ ನೂರೆಂಟು. ಸಂತಸ, ಸಂಭ್ರಮವೂ ಇದೇ . ಭಾವ ಮಂಜಿನಲ್ಲಿ ಮುಸುಕಿ ನಿಧಾನ ಕರಗಿದರೂ ಆ ಹನಿ ಮಾತ್ರ ಒಂದೇ ರೀತಿ. ಭಾವನೆಯು ಹನಿಗಳು ತಮ್ಮಷ್ಟಕ್ಕೆ ಮಾತನಾಡಲಾರಂಭಿಸಿದರೆ ಅದು ‘ನೂರೆಂಟು ಮಾತು’ ಎಂದು ಲೇಖಕ ವಿಶ್ವೇಶ್ವರ ಭಟ್ ಹೇಳುತ್ತಾರೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE