ನೆಲದೊಡಲು

Author : ಚಿನ್ನಸ್ವಾಮಿ ಡಿ

Pages 124

₹ 100.00




Year of Publication: 2016
Published by: ನಿಶಾಂತ ಎಂಟರ್ ಪ್ರೈಸೆಸ್ 
Address: #20, 17ನೇ ಮುಖ್ಯ ರಸ್ತೆ, 2ನೇ ಹಂತ, `ಸಿ’ ಝೋನ್, ಜೆ.ಪಿ. ನಗರ, ಮೈಸೂರು

Synopsys

`ನೆಲದೊಡಲು’ ಕೃತಿಯು ಚಿನ್ನಸ್ವಾಮಿ ಡಿ ಅವರ ಲೇಖನಗಳ ಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳಿಂದ ಪ್ರೇರಣೆಗೊಂಡು ಹೊಸ ಸಂಚಲನಕ್ಕೆ ಮುನ್ನಡೆ ಬರೆದಂತಹ ಕಾಲ. 60ರ ದಶಕದ ಅಂತ್ಯ ಮತ್ತು 70ರ ದಶಕದ ಆರಂಭದ ಸಾಂಸ್ಕೃತಿಕವಾಗಿ ತಲ್ಲಣಗೊಂಡ ಕಾಲ, ಯಾವುದೇ ನಿಶ್ಚಿತ ನೆಲೆ ಇಲ್ಲದೆ ಕ್ಷಣದಿಂದ ಕ್ಷಣಕ್ಕೆ ನೀರ ಗುಳ್ಳೆಯಾಗಿ ಮಾಡುವ ವೈಚಾರಿಕ ಸಂಘರ್ಷಕ್ಕೆ ನಾಂದಿ ಹಾಕಿದ ಕಾಲ, ನೆಲ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾಲ. ದಲಿತ ಯುಗದ ದಲಿತೋದಯ ಕಾಲ, ಹದವಿಲ್ಲದ ಸಂಸ್ಕೃತಿಯನ್ನು ಹದಗೊಳಿಸುವ ಕಾಲವಾಗಿ ಕಾಣಿಸಿಕೊಂಡಿತು. ಈ ದಶಕದಲ್ಲಿ, ದಲಿತ ಸಾಹಿತ್ಯದಲ್ಲಿ ಎಲೆಮರೆಯ ಕಾಯಿಯಂತೆ ಸಾಹಿತ್ಯ ವಲಯದಲ್ಲಿ ಪ್ರಭಾವಿತರಾದರು ಹಾಗೂ ದಲಿತರ ಮೇಲಿನ ದೌರ್ಜನ್ಯವನ್ನು ಜೀವನದುದ್ದಕ್ಕೂ ಪ್ರತಿಭಟನೆಯ ಮೂಲಕ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡಿದರು. ಅಂತಹವರ ಸಾಹಿತ್ಯದಲ್ಲಿ ಪ್ರಮುಖವಾಗಿರುವಂತಹ ಮಹಾಕಾವ್ಯವನ್ನು ಕುರಿತು ಸಮಾಜದ ಅಲಕ್ಷಿತರಾದ ದಲಿತರಿಗೆ ನೆಲೆ-ಬೆಲೆ ಎಂತಹದೆಂದು ಅರಿಯಲು ಮುಳ್ಳೂರು ನಾಗರಾಜು ಅವರ 'ನೆಲದ ಜೋಗುಳ' ಮಹಾಕಾವ್ಯದಲ್ಲಿ ದಲಿತ ಸಂವೇದನೆ ಎಂಬ ಶೀರ್ಷಿಕೆಯನ್ನು ಎಂ.ಫಿಲ್ ಪದವಿಗಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಶೀರ್ಷಿಕೆಯಡಿ ಬಂದಿರುವ ಪ್ರಬಂಧವನ್ನು ಪುಸ್ತಕ ರೂಪಕ್ಕೆ ತರಲು 'ನೆಲದೂಡಲು' ಎಂಬ ಶೀರ್ಷಿಕೆ ನೀಡಿರುತ್ತೇನೆ. ಜನಪರ ಸಂಸ್ಕೃತಿ ಹಾಗೂ ಜನ ವಿರೋಧ ಸಂಸ್ಕೃತಿಗಳ ನಡುವಿನ ಸಂಘರ್ಷಾತ್ಮಕ ಹಿನ್ನೆಲೆಯನ್ನು ವಾಸ್ತವ ಬದುಕಿನ ಪ್ರಮುಖ ಘಟನೆಗಳೊಂದಿಗೆ ಮುಖಾಮುಖಿ ಮಾಡಿ, ನೆಲದ ಸಂಸ್ಕೃತಿಯನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂಬುದು ಇಲ್ಲಿ ವಿಶ್ಲೇಷಿತವಾಗಿದೆ.

 

About the Author

ಚಿನ್ನಸ್ವಾಮಿ ಡಿ

ಲೇಖಕ ಚಿನ್ನಸ್ವಾಮಿ ಡಿ. ಡಿ. ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಬ್ಯಾಡಮೂಡ್ಲು ಗ್ರಾಮದವರು. ತಾಯಿ ಗುರುಸಿದ್ದಮ್ಮ, ತಂದೆ ದೊಡ್ಡಸಿದ್ದಯ್ಯ. ಪ್ರಾಥಮಿಕ ಶಿಕ್ಷಣವನ್ನು ಬ್ಯಾಡಮೂಡ್ಲು, ಹಾಗೂ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹರದನಹಳ್ಳಿಯಲ್ಲಿ,  ಪಿ.ಯು.ಸಿ. ಮತ್ತು ಪದವಿಯನ್ನು ಚಾಮರಾಜನಗರದಲ್ಲಿ, ಸ್ನಾತಕೋತ್ತರ ಹಾಗೂ ಎಂ.ಫಿಲ್. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ಬಿ.ಇಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ,, ಭಾರತೀಯ ಭಾಷಾ ಸಂಸ್ಥಾನ, ಮೈಸೂರಿನಲ್ಲಿ, ತೆಲುಗು ಭಾಷೆ ಡಿಪ್ಲೋಮಾವನ್ನು ಪೂರೈಸಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕನ್ನಡ ನಾಟಕಗಳಲ್ಲಿ ಬುದ್ಧ ಬಸವ ಅಂಬೇಡ್ಕರ್” ವಿಷಯವಾಗಿ ಸಂಶೋಧನಾ ವಿದ್ಯಾರ್ಥಿ. ಅವರ ಮೊದಲ ವಿಮರ್ಶೆ ಕೃತಿಯಾದ ‘ನೆಲದೊಡಲು'ನ್ನು ಹೊರತಂದಿದ್ದಾರೆ ಮಹಿಳಾ ಸಬಲೀಕರಣದಲ್ಲಿ ಅಂಬೇಡ್ಕರ್, ...

READ MORE

Related Books