ನೆಲ ಮೂಲ ಚಿಂತನೆ ಎಂಬ ಶಿರ್ಷೀಕೆಯಡಿಯಲ್ಲಿ ಹೈದರಾಬಾದ್ ಕರ್ನಾಟಕದ ಈಗೀನ ಕಲ್ಯಾಣ ಕರ್ನಾಟಕದ ಲೇಖಕರ ಸಾಹಿತ್ಯದ ಪರಿಚಯಾತ್ಮಕ ಹತ್ತು ಲೇಖನಗಳಿವೆ. ಜೊತೆಗೆ ಈ ಭಾಗದ ಹೋರಾಟಗಾರರು ಮತ್ತು ಲೇಖಕರ ಕೃತಿಗಳನ್ನು ಇಲ್ಲಿ ವಿವೇಚಿಸಲಾಗಿದೆ. ಚನ್ನಣ್ಣ ವಾಲೀಕಾರರ ಸಾಹಿತ್ಯ ಜಂಬಣ್ಣ ಅಮರಚಿಂತ ಅಲ್ಲಮ ಪ್ರಭು ಬೆಟ್ಟದೂರ ಕೆ. ಷರೀಫಾ. ಹಣಮಂತರಾವ್ ದೊಡ್ಡಮನಿ ಮತ್ತು ವಿಚಾರ ಸಾಹಿತ್ಯ ಜೊತೆಗೆ ಶರಣರ ಆಶಯಗಳನ್ನು ಈ ಕೃತಿ ಅನಾವರಣ ಗೊಳಿಸುತ್ತದೆ.
ಡಾ. ವೆಂಕಟೇಶ್ವರ ಕೆ ಕೊಲ್ಲಿ ಅವರು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗಂಗಾರಾವಲಪಲ್ಲಿಯವರು. (ಜನನ: 31ನೇ ಜುಲೈ 1986) ತಾಯಿ ಹುಲಿಗೆಮ್ಮ, ತಂದೆ ಕಾಶಪ್ಪ. ಪ್ರಾಥಮಿಕ ವಿದ್ಯಾಭ್ಯಾಸ ಸ್ವಂತ ಊರಲ್ಲಿ ಮುಗಿಸಿ ಪ್ರೌಢ ಶಿಕ್ಷಣ ಪಕ್ಕದ ಕಾನಾಗಡ್ಡದಲ್ಲಿ ಪೂರೈಸಿ, ಪದವಿ ಶಿಕ್ಷಣವನ್ನು ಗುರುಮಠಕಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರೈಸಿದರು. ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರು. ‘ದಲಿತ ಚಳವಳಿ ಮತ್ತು ಸಾಹಿತ್ಯಕ್ಕೆ ದಲಿತೇತರರ ಕೊಡುಗೆ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ .ಯಿಂದ ಪಿ.ಎಚ್. ಡಿ ಪಡೆದಿದ್ದಾರೆ. ಕೃತಿಗಳು: ನೆಲ ಮೂಲ ಚಿಂತನೆ (ವಿಮರ್ಶಾ ಲೇಖನಗಳು), ಬಿಸಿಲ ಬೀದಿಯ ಪಯಣ, ಚಿಂತನೆಯ ...
READ MOREನೆಲ ಮೂಲ ಚಿಂತನೆ. ವಿಮರ್ಶಾಲೇಖನಗಳು