ಲೇಖಕ ಕೃಷ್ಣಮೂರ್ತಿ ಚಂದರ್ ಅವರ ಸಾಹಿತ್ಯ ವಿಮರ್ಶೆ ಕೃತಿ ʼನವ್ಯೋತ್ತರ ವಿಮರ್ಶೆ ಕೆಲವು ನಿಲುವುಗಳುʼ. ಪುಸ್ತಕದಲ್ಲಿ ಲೇಖಕ ಪ್ರೊ. ಕೃಷ್ಣ ಮನವಲ್ಲಿ ಅವರು, “ಕನ್ನಡದ ಓದುಗರಿಗೆ ನವೋತ್ತರದ ಚರ್ಚೆ ಬಹುತೇಕ ದೊರಕಿಲ್ಲವೆಂದೆನಿಸುತ್ತದೆ. ಕೃಷ್ಣಮೂರ್ತಿ ಚಂದರ್ ಅವರ 'ನವೋತ್ತರ ವಿಮರ್ಶೆ' ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿನ ಪ್ರಸ್ತುತ ಈ ಕಾಳಜಿಯತ್ತ ಗಮನ ಹರಿಸುತ್ತಿದೆ. ನವೋತ್ತರ ವಿಮರ್ಶೆಯ ತಾತ್ವಿಕ ನೆಲೆಯನ್ನು ಚಂದರ್ ಅವರು ಇಪ್ಪತ್ತನೆಯ ಶತಮಾನದ ಪ್ರಮುಖ ಚಿಂತಕರಾದ ವಿಟಗನ್‌ಸ್ಟೈನ್ ಹಾಗೂ ವಾಲ್ಟರ್ ಬೆನ್ಯಮಿನ್‌ರ ಚಿಂತನೆಯ ಹಿನ್ನೆಲೆಯಲ್ಲಿ ನೋಡ ಬೇಕೆಂಬುದನ್ನು ಪ್ರಸ್ತಾವನೆ'ಯಲ್ಲಿ ನಮ್ಮ ಮುಂದೆ ಇಡುತ್ತಾರೆ. ಇದಕ್ಕೂ ಮಿಗಿಲಾಗಿ, ಮುಖ್ಯವಾಗಿ 'ಐರೋಪ್ಯ' ನೆಲೆಯಲ್ಲೇ ಕೇಂದ್ರೀಕೃತ ವಾಗಿರುವ ನವೋತ್ತರ ಚಿಂತನೆಯನ್ನು ಕನ್ನಡದ ಸಂದರ್ಭಕ್ಕೆ ಹೇಗೆ ಸಮೀಕರಿಸ ಬೇಕೆಂಬ ಮುಖ್ಯ ಪ್ರಶ್ನೆಯನ್ನು ಎತ್ತುತ್ತಾರೆ. ಈ ಕೃತಿ ನಿಜವಾಗಿಯೂ ಕನ್ನಡ ವಿಮರ್ಶೆಗೆ ಸಮಯೋಚಿತವಾಗಿದೆ” ಎಂದು ಹೇಳಿದ್ದಾರೆ. ಪುಸ್ತಕದಲ್ಲಿ ಆರು ಲೇಖನಗಳಿವೆ.
ಕೃಷ್ಣಮೂರ್ತಿ ಚಂದರ್ ಹುಟ್ಟಿದ್ದು 1954ರಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಇಡಿ, ಎಂ.ಎ, ಪಿ.ಎಚ್ ಡಿ ಪಡೆದು ಆನಂತರ ಕೆನಡಾದ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ವಿಭಾಗೀಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ...
READ MORE