‘ನನ್ನ ಶಾಲಾ ಗುರುಗಳು’ ಕೃತಿಯು ಹೇಮಾ ಪಟ್ಟಣಶೆಟ್ಟಿ ಅವರ ಶಾಲಾ ಗುರುಗಳನ್ನು ಕುರಿತ ಗೌರವ ಲೇಖನಗಳ ಸಂಕಲನವಾಗಿದೆ. ಕೃತಿಯಲ್ಲಿನ 24 ಅಧ್ಯಾಯಗಳಾದ, ನನ್ನ ಶಾಲಾ ಗುರುಗಳು( ಶಿವಶಂಕರ ಹಿರೇಮಠ), ನನ್ನ ಶಾಲಾ ಗುರುಗಳು (ಟಿ.ಆರ್. ರಾಧಾಕೃಷ್ಣ), ನನ್ನ ಗುರುಗಳು ( ಶ್ಯಾಮಲಾ ಮಾಧವ), ಗುರು ಗುನ ಲಿಖಾ ನ ಜಾಯ್ (ಶೈಲಾ ಛಬ್ಬಿ), ನನ್ನ ಶಾಲಾ ಗುರುಗಳು (ಬಸವರಾಜ ಚಿಕ್ಕನರಗುಂದ), ನನ್ನ ಗುರುಗಳು( ಎಂ. ಡಿ. ಗೋಗೇರಿ), ನನ್ನ (ಶಾಲಾ!) ಗುರುಗಳು (ಅಮೃತ ರಾ. ಯಾರ್ದಿ), ನನ್ನ ರೂವಾರಿ ಗುರುಗಳು( ನರಸಿಂಹ ಪರಾಂಜಪೆ), ನನ್ನ ಶಾಲಾ ಗುರುಗಳು( ಶ್ರೀನಿವಾಸ್ ವಿ. ಸುತ್ರಾವೆ), ನನ್ನ ಗುರುಗಳು( ಬಿ. ಎಂ. ರೋಹಿಣಿ), ನನ್ನ ವಿದ್ಯಾ ಗುರುಗಳು( ಎಲ್. ವಿ. ಶಾಂತಕುಮಾರಿ), ನನ್ನ ಶಾಲಾ ಗುರುಗಳು( ಮಂದಾಕಿನಿ ಪುರೋಹಿತ), ನನ್ನ ಶಾಲಾ ಗುರುಗಳು( ಆರ್. ತಾರಿಣಿ ಶುಭದಾಯಿನಿ), ನನ್ನ ಶಾಲಾ ಗುರುಗಳು (ಪರಮೇಶ್ವರ ಹೆಗಡೆ), ಗುರು... ಸದಾ ಹಸಿರು (ವಿಜಯಕಾಂತ ಪಾಟೀಲ), ನನ್ನ ಗುರುಗಳು (ನಾ. ಡಿಸೋಜ), ನನ್ನ ಶಾಲಾ ಗುರುಗಳು (ಸಂಗನಾಳಮಠ ಯು. ಎಸ್), ಮನದಲ್ಲಿ ನಿಂತು ಮಾರ್ಗ ತೋರಿದ ಗುರುಗಳು(ಎಲ್. ಸಿ. ಸುಮಿತ್ರಾ), ನನ್ನ ಶಾಲಾ ಗುರುಗಳು( ಕುತ್ತಾಡಿ ಆನಂದ ಗಾಣಿಗ), ನನ್ನ ಶಾಲಾ ಗುರುಗಳು( ಕು.ಗೋ), ನನ್ನ ಶಾಲಾ ಗುರುಗಳು( ಕೆ. ಪಿ. ಉಭಯಭಾರತಿ), ನನ್ನ ಶಾಲಾ ಗುರುಗಳು(ಮಿರ್ಜಾ ಬಷೀರ್), ನನ್ನ ಶಾಲಾಗುರು(ದೇವರು)ಗಳು (ರಾಗಿಣಿ ಆರ್), ನಂ ಮೇಷ್ಟ್ರುಗಳು( ಸ. ರಘುನಾಥ) ಇವೆಲ್ಲವುಗಳನ್ನು ಒಳಗೊಂಡಿರುತ್ತದೆ.
ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ...
READ MORE