ನನ್ನ ಡ್ರೈವಿಂಗ್ ಡೈರಿ

Author : ರಾಜೇಶ್ವರಿ ತೇಜಸ್ವಿ

Pages 132

₹ 150.00




Year of Publication: 2021
Published by: ಅಭಿನವ ಪ್ರಕಾಶನ
Address: #17, 18 - 2, 1ನೇ ಮೈನ್ ರೋಡ್, ಮಾರೇನಹಳ್ಳಿ, ಪಿ. ಎಫ್ ಲೇಔಟ್, ವಿಜನಗರ. ಬೆಂಗಳೂರು ಕರ್ನಾಟಕ- 560040

Synopsys

‘ನನ್ನ ಡ್ರೈವಿಂಗ್ ಡೈರಿ’ ಕೃತಿಯು ರಾಜೇಶ್ವರಿ ತೇಜಸ್ವಿ ಅವರ ಕೆಲವು ನೆನಪುಗಳು- ಸಂದರ್ಶನಗಳನ್ನು ಒಳಗೊಂಡಂತಹ ಲೇಖನಗಳ ಸಂಕಲನವಾಗಿದೆ. ರಾಜೇಶ್ವರಿ ತೇಜಸ್ವಿ ಅವರು ತಮ್ಮ ಕಾಲೇಜಿನ ನೆನಪುಗಳನ್ನು ಬಿತ್ತರಿಸಿದ್ದಾರೆ. ಮೈಸೂರಿನ ಮಹಾರಾಣಿಯ ಕಾಲೇಜಿನ ಅನುಭವಗಳನ್ನು ಇಲ್ಲಿ ಕಾಣಬಹುದು. ಕಾರು ಕಲಿತ ಅನುಭವವನ್ನು ರಾಜೇಶ್ವರಿಯವರು  ಕೃತಿಯಲ್ಲಿ ಹಂಚಿಕೊಂಡಿದ್ದಾರೆ : ಈಗ ಮನೆಗೆ ಬಂತು ಹೊಸ ಪ್ರೀಮಿಯರ್ ಪದ್ಮಿನಿ ಫಿಯಟ್ ಹಸಿರು ಕಾರು. ನನಗೆ ಕಾರು ಕಲಿಸಬೇಕೆನ್ನುವುದು ತೇಜಸ್ವಿ ಇರಾದೆ. ಪ್ರಯತ್ನ ಶುರುವಾಯ್ತು. ನನಗೊ ಹೆದರಿಕೆಯಿಂದ ‘ಏಕೆ ಕಲಿಯಬೇಕಪ್ಪ’ ಎನ್ನುವ ಮನಸ್ಸು. ಆದರೆ ತೇಜಸ್ವಿ ಬಿಡಬೇಕಲ್ಲ. ‘ನೀನು ಸ್ಟೇರಿಂಗ್ ಹಿಡಿ, ನಾನು ಆಕ್ಸಿಲೇಟರ್ ಮೇಲೆ ಕಾಲಿಟ್ಟುಕೊಂಡಿರ್‍ತೀನಿ. ಕಾರು ಬಿಡು’ ಎಂದರು. ಹೀಗೆ ಮೈಸೂರಿನಿಂದ ಮೂಡಿಗೆರೆಯ ತೋಟದತನಕ ನಮ್ಮ ಜರ್ನಿ. ಎಷ್ಟು ದೂರ ಬಿಟ್ಟೆನೋ ನೆನಪಿಲ್ಲ. ಇಷ್ಟಾದರೂ ನಾನು ಕಲಿಯಲಿಲ್ಲ. ‘ನಿಮಗೆ ಕಾರು ಹೇಳಿಕೊಡಲು ಬರೋಲ್ಲ’ ಎಂದು ಮತ್ತೆ ಹಳೇ ಆರೋಪ ಮಾಡಿದೆ ಎನ್ನುತ್ತಾರೆ.

About the Author

ರಾಜೇಶ್ವರಿ ತೇಜಸ್ವಿ - 14 December 2021)

ರಾಜೇಶ್ವರಿ ತೇಜಸ್ವಿ- 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಹೆಣ್ಣುಮಕ್ಕಳಿಗೂ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ ಮಾಡಲು ಮಾನಸ ಗಂಗೋತ್ರಿ ಮೈಸೂರಿಗೆ ಬಂದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪ್ರೀತಿಸಿದರು. ಆನಂತರ ಇವರ ಬದುಕಿನ ದಿಕ್ಕೇ ಬದಲಾಯಿಸಿತು. 1966ರಲ್ಲಿ  ವಿವಾಹವಾದರು. ‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕ. ಈಗ ಅದು ಐದನೇ ಮುದ್ರಣ ಕಂಡಿದೆ.  ಇವರ ಹವ್ಯಾಸವೂ ವಿಭಿನ್ನವಾಗಿದೆ. ಕ್ರೋಶ-ಟೈಲರಿಂಗ್, ಮೊಮ್ಮಕ್ಕಳು ಮತ್ತು ನೆರೆಹೊರೆಯ ...

READ MORE

Related Books