ಕೃತಿಯ ಒಟ್ಟು ಜೀವಿಗಳ ಸಂಖ್ಯೆಯಲ್ಲಿ ಮಾನವರು ನಗಣ್ಯ. ಪ್ರಕೃತಿಯ ದೃಷ್ಟಿಯಲ್ಲಿ ಎಲ್ಲಾ ಜೀವಿಗಳು ಸಮಾನರು. ಆದರೆ ಕೇವಲ ಅಭಿವೃದ್ಧಿಯಾದ ಮಿದುಳನ್ನು ಹೊಂದಿರುವ ಮಾನವ ಇತರ ಜೀವಿಗಳಿಗಿಂತ ತಾನು ಭಿನ್ನ ಮತ್ತು ಮೇಲ್ಮಟ್ಟದವನು ಎನ್ನುವ ಹುಸಿ ನಂಬಿಕೆಯಿಂದ ಬೀಗುತ್ತಾ ಬಂದಿದ್ದಾನೆ. ಇದರ ನೇರ ಪರಿಣಾಮವೆಂದರೆ ಪರಿಸರ ನಾಶದಿಂದ ತನ್ನ ಕುಲಕ್ಕೇ ತಂದುಕೊಂಡಿರುವ ಅಪಾಯಗಳು. ಇಂತಹ ಅಪಾಯವನ್ನೂ ಗ್ರಹಿಸದ ಮಟ್ಟಕ್ಕೆ ಮಾನವರ ಅಹಂಕಾರ ದಿನದಿನವೂ ಹೆಚ್ಚುತ್ತಲೇ ಇದೆ. ಇಂತಹ ಅಹಂಕಾರದಿಂದಾಗಿಯೇ ಪ್ರತಿಕ್ಷಣವೂ ನಮ್ಮ ಅನುಭವಕ್ಕೆ ಬರುತ್ತಿರುವ ಅಂತರಂಗದ ಅತೃಪ್ತಿ ಅಸಹಾಯಕತೆ ದುಖ ಬೇಸರ ಹತಾಶೆಗಳನ್ನು ಮರೆಮಾಚಿ ನಾವೆಲ್ಲಾ ನಿರಂತರವಾದ ಸುಖದ ಬೆನ್ನುಹತ್ತಿದ್ದೇವೆ. ಹೊರಗಿನ ವಸ್ತು ಸೌಲಭ್ಯ ನಮ್ಮ ದೇಹಕ್ಕೆ ನೀಡಬಹುದಾದ ಹಿತವಾದ ಅನುಭವವನ್ನೇ ಸುಖ ಎಂದುಕೊಳ್ಳುತ್ತಾ ಅಂತರಂಗದ ಹೋರಾಟಗಳನ್ನು ಕಡೆಗಣಿಸುತ್ತಾ ಪ್ರಕೃತಿಯ ಅನನ್ಯ ವರವಾದ ನಮ್ಮ ಮಿದುಳಿನ ಮಿತಿಗಳನ್ನು ಮೀರಿ ಬದುಕಲು ಯತ್ನಿಸುತ್ತಾ ನಿರಂತರವಾಗಿ ಸೋಲುತ್ತಿದ್ದೇವೆ. ಮಿದುಳಿನ ಮಿತಿಗಳಲ್ಲಿ ಅಂತರಂಗದ ಸಮಾಧಾನವನ್ನು ಹುಡುಕುವುದು ಅಂದರೆ ಏನು ಮತ್ತು ಹೇಗೆ? ಮಿದುಳಿನ ರಚನೆಯನ್ನು ವೈಜ್ಞಾನಿಕವಾಗಿ ನಾವು ತಿಳಿದುಕೊಂಡಿದ್ದು ಕಳೆದ ಶತಮಾನದಲ್ಲಿ ಮಾತ್ರವಾಗಿದ್ದರೂ ಆಧ್ಯಾತ್ಮಿಕ ಚಿಂತನೆಗಳು ಈ ಪ್ರಶ್ನೆಗೆ ಶತಶತಮಾನಗಳ ಹಿಂದೆಯೇ ಅನುಭಾವದಲ್ಲಿ ಉತ್ತರ ಕಂಡುಕೊಂಡಿದ್ದವು. ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಚಿಂತನೆಗಳನ್ನು ನಿತ್ಯಜೀವನದಲ್ಲಿ ಉಪಯೋಗಿಸುವುದು ಹೇಗೆ ಎಂದು ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ನಮ್ಮೆಲ್ಲರ ಮಾನಸಿಕ ಪ್ರಪಂಚ ರೂಪುಗೊಳ್ಳುವ ಮತ್ತು ಕಾರ್ಯನಿರ್ವಹಿಸುವ ವಿಧಾನಗಳ ಸ್ಥೂಲ ಪರಿಚಯ ಇಲ್ಲಿದೆ. ಮಾನಸಿಕ ಹೋರಾಟಗಳ ಏರಿಳಿತಗಳನ್ನು ಗುರುತಿಸುವ ನಿಭಾಯಿಸುವ ಸರಳ ವಿಧಾನಗಳನ್ನು ಇಲ್ಲಿ ಕೊಡಲಾಗಿದೆ. ಸರಳವಾದ ಮತ್ತು ಮನತಲುಪುವ ನಿರೂಪಣೆ ಪುಸ್ತಕದ ವೈಶಿಷ್ಟ್ಯ. ಎಲ್ಲ ವಯಸ್ಸಿನವರಿಗೂ ಉಪಯುಕ್ತವಾಗಬಲ್ಲ ಕನ್ನಡದ ಅಪರೂಪದ ಪ್ರಯೋಗ.
ನಡಹಳ್ಳಿ ವಸಂತ್ ಅವರು 04 04 1958ರಂದು ಸೊರಬದಲ್ಲಿ ಜನಿಸಿದರು. ಬಿಬಿಎಮ್ ಹಾಗೂ ಆಪ್ತಸಮಾಲೋಚನೆ ಮತ್ತು ಮನೋಚಿಕಿತ್ಸವಿಷಯದಲ್ಲಿ ಎಂ. ಎಸ್ ಪೂರೈಸಿದರು. ವೃತ್ತಿಯಲ್ಲಿ ಮನೋಚಿಕಿತ್ಸೆ ಮತ್ತು ಆಪ್ತಸಮಾಲೋಚಕಿಯಾಗಿರುವ ಇವರು ದಾಂಪತ್ಯಚಿಕಿತ್ಸೆ ಮತ್ತು ಲೈಂಗಿಕ ಮನೋಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಕೃತಿಗಳು: ಏ ಬೀಳ್ತೀಯಾ ಹುಷಾರು! (ಪೋಷಕರ ಮಕ್ಕಳ ಸಂಬಂಧದ ಕುರಿತಾಗಿ, ಭೂಮಿ ಬುಕ್ಸ್ ಬೆಂಗಳೂರು), ನೀವು ನಿಜಕ್ಕೂ ಸುಖವಾಗಿದ್ದೀರಾ? (ವಿವಿಧ ಪತ್ರಿಕೆಗಳಲ್ಲಿ ಬರೆದ 39 ಲೇಖನಗಳ ಸಂಗ್ರಹ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.), ನಮ್ಮೊಳಗಿನ ಭಾವಪ್ರಪಂಚ (ನಮ್ಮ ಅಂತರಂಗದ ಜಗತ್ತಿನ ಸೂಕ್ಷ್ಮ ಪರಿಚಯ., ಕರ್ನಾಟಕ ಸಂಘ ಶಿವಮೊಗ್ಗ ಇವರ ...
READ MORE