ನಮ್ಮ ನೆಲದ ಕಥೆ

Author : ಲಕ್ಷ್ಮೀಶ್ ಹೆಗಡೆ ಸೋಂದಾ

Pages 276

₹ 175.00




Year of Publication: 2016
Published by: ಅಕ್ಷಯ ಪ್ರಕಾಶನ
Address: ಬಸಪ್ಪ ಬಡಾವಣೆ,ಪಟ್ಟಣಗೆರೆ,ರಾಜರಾಜೇಶ್ವರಿ ನಗರ,ಬೆಂಗಳೂರು
Phone: 9632587426

Synopsys

ಪ್ರಸ್ತುತ ಕೃತಿ ಲಕ್ಷ್ಮೀಶ್ ಸೋಂದಾರವರ " ನಮ್ಮ‌ನೆಲದ ಕಥೆ" ಎಂಬ ಅಂಕಣ ಬರಹದ ಸಂಗ್ರಹವಾಗಿದ್ದು,ಲಕ್ಷ್ಮೀಶ್ ಸೋಂದಾರವರು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಂಡ ಸಂಶೋಧನೆ ಮತ್ತು ಕ್ಷೇತ್ರಾನ್ವೇಷಣೆಯ ಫಲಶ್ರುತಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಅನೇಕ ಕುತೂಹಲಕಾರಿ ಸಂಗತಿಗಳಿವೆ.ಸಂಶೋಧನಾರ್ಥಿಗಳಿಗೆ,ಇತಿಹಾಸ ಸಂಸ್ಕೃತಿ ಪ್ರಿಯರಿಗೆ ಇಷ್ಟವಾಗುವ ಕೃತಿಯಾಗಿದೆ.

ರಾಷ್ಟ್ರಮಟ್ಟದ ಇತಿಹಾಸ ತಜ್ಞರು ಎಸ್. ಜೆ.ಜೋಷಿ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ‘ನಮ್ಮ ನೆಲದ ಕಥೆಯಲ್ಲಿ ಶ್ರೀ ಲಕ್ಷ್ಮೀಶ ಸೋಂದಾರವರು ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿ 20, ಸಂಶೋಧನಾ ಲೇಖನಗಳಲ್ಲಿ ನಮ್ಮ ನಾಡಿನ ಅನುರಾಗವನ್ನೇ ಹರಡಿದ್ದಾರೆ. ಈ ಪ್ರದೇಶದ ಪ್ರಿ ಹಿಸ್ಟರಿ, ಪ್ರೋಟೋ ಹಿಸ್ಟರಿ, ಹಿಸ್ಟರಿ, ಪ್ರಾಚೀನ, ಮಧ್ಯಯುನ, ಆಧುನಿಕ ಕಾಲಘಟ್ಟಗಳಿಗೆ ಸಂಬಂಧಿಸಿದ ಆ ಕಾಲದ ನಿಜ ಜೀವನದ ಘಟನೆಗಳ, ವ್ಯಕ್ತಿಗಳ, ಬದುಕಿನ ವಿಸ್ತರಣೆಯನ್ನು ಸ್ಪುಟವಾಗಿ ತೋರಿಸಿದ್ದಾರೆ. ಅವರಲ್ಲಿ ಮೇರೆದಪ್ಪಿ ಬರೆಯುವಷ್ಟು ಉತ್ಸಾಹವಿದೆ. ಅರಸುವಿಕೆ, ಅನಿಸುವಿಕೆ ಹಾಗೂ ಸಾತಥ್ಯದ ಅರ್ಥ ಎಲ್ಲವೂ ಇದೆ. ಉತ್ತರ ಕನ್ನಡದ ಪ್ರದೇಶದ ಮಾನವನ ಬದುಕು, ಸಾಹಿತ್ಯ, ತತ್ವಜ್ಞಾನ, ಶಿಲ್ಪಗಳು, ಶಿಲಾಲೇಖನಗಳು, ಗುಡಿಗೋಪುರಗಳು, ರಾಜನ್ಯದ ಆಡಂತ, ದೈವ ನಂಜಕ, ಜನಪದ ಆಟವಾರ, ನೃತ್ಯ, ಸಂಗೀತ, ಶಿಕ್ಷಣ, ಅರಣ್ಯ ಸಂಪದ, ಸಾಹಿತಿಗಳು, ಧರ್ಮಗುರುಗಳು, ಧರ್ಮಪೀಠಗಳು ಇತ್ಯಾದಿಗಳ ವೈವಿಧ್ಯತೆಯನ್ನು ತಮ್ಮ ಲೇಖನಗಳಲ್ಲಿ ಲಕ್ಷ್ಮೀಶ ಹೆಗಡೆಯವರು ಮೂಡಿಸಿದ್ದಾರೆ, ಅವರು ಹೆಸಲಸಿದ ಗ್ರಂಥದ ಶಿರೋನಾಮೆಯೇ ಹೇಳುವಂತೆ "ನಮ್ಮ ನೆಲದ ಕಥೆ" ಎಷ್ಟೊಂದು ತಮ್ಮ ನೆಲದ ಬಗ್ಗೆ ಅಮಾನ, ಪ್ರೀತಿ ಹಾಗೂ ಅನುರಾಗ ಇದೆ ಎಂಬುದನ್ನು ಭಾವ ಸೀಮೋಲ್ಲಂಘನ ಮಾಡಿದಂತೆ ಭಾವಾತೀತದ ಇಾತಕ್ಕೆ ಕರೆದೊಯಂತೆ, ಟ್ಯಾಲೆಂಟಲ್ ದರ್ಶನದ ದರ್ಶನವನ್ನು ತೋರಿದಂತೆ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.

About the Author

ಲಕ್ಷ್ಮೀಶ್ ಹೆಗಡೆ ಸೋಂದಾ
(18 February 1984)

ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ಮಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನು ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 13 ಕೃತಿಗಳು, 400 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013 ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016 ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ...

READ MORE

Related Books