ಮೈಸೂರು ಇಂಟರ್ ಮೀಡಿಯೇಟ್ ತರಗತಿಯ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಲೇಖಕ ಜಿ.ಪಿ. ರಾಜರತ್ನಂ ಅವರು `ನಮ್ಮ ನಮ್ಮವರು' ಎಂಬ ಲೇಖನಗಳ ಕೃತಿಯನ್ನು ಸಂಪಾದಿಸಿದ್ದಾರೆ. ಮೈಸೂರು (1939) ಇಂಟರ್ ಕಾಲೇಜು ಹಾಗೂ ತುಮಕೂರು (1944) ಇಂಟರ್ ಕಾಲೇಜಿನ ವಿದ್ಯಾರ್ಥಿಗಳು ಕಾಲಕಾಲಕ್ಕೆ ಬರೆದ ಬರೆಹಗಳ ಆಯ್ದ ಸಂಕಲನವಿದು. ಕೃತಿಯ ಮೊದಲರ್ಧ ಭಾಗದಲ್ಲಿ ವಿದ್ಯಾರ್ಥಿಗಳು ನಿಂತ ಕಾಲಿನ ಮೇಲೆಯೇ ಅಂದರೆ ತತ್ ಕ್ಷಣವೇ ಬರೆದ ಬರೆಹಗಳು ಮತ್ತು ಎರಡನೇ ಭಾಗದ ಲೇಖನಗಳು ವಿಚಾರಗಳ ಮಿಂಚು ಗೊಂಚಲಾಗಿವೆ. ಲಘುವಾಗಿ ಹೇಗೆ ಇರಬಲ್ಲರೋ ಹಾಗೆ ಈ ವಿದ್ಯಾರ್ಥಿಗಳು ಸಮಯ ಬಂದಾಗ ಗೌರವ ಬುದ್ದಿ ಬಳಸಬಲ್ಲರು ಎಂಬುದಕ್ಕೆ ಲೇಖಕರು ಈ ಕೃತಿಯನ್ನೇ ಸಾಕ್ಷಿ ತೋರುತ್ತಾರೆ. ಸಂಕಲನದಲ್ಲಿ ಒಟ್ಟು 66 ಲೇಖನಗಳಿವೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE