ನಂಬಿದ್ರೆ ನಂಬಿ ಬಿಟ್ರೆ ಬಿಡಿ

Author : ನಾ. ಸೋಮೇಶ್ವರ

Pages 180

₹ 153.00




Year of Publication: 2022
Published by: ಸಾವಣ್ಣ ಪ್ರಕಾಶನ
Address: ಸಾವಣ್ಣ ಪ್ರಕಾಶನ, ಮೈಸೂರು
Phone: 91-80-4122 9757

Synopsys

ಥಟ್ ಅಂತ ಹೇಳಿ ಜನಪ್ರಿಯ ಕ್ವಿಜ್‌ ಕಾರ್ಯಕ್ರಮವು 20 ವರ್ಷಗಳಲ್ಲಿ 4300 ಕಂತುಗಳು ಪ್ರಸಾರವಾಗಿವೆ ಎಂದರೆ, ಆ ಯಶಸ್ಸಿನಲ್ಲಿ ಈ ಪುಸ್ತಕದ್ದೂ ಪ್ರಮುಖ ಪಾಲು ಇದೆ. ಪ್ರತಿ ಕಂತಿನ ಕೊನೆಯಲ್ಲಿ ವಿಸ್ಮಯ ವಿಜ್ಞಾನದ ಒಂದು ಕಿವಿಮಾತನ್ನು ಹೇಳುತ್ತಿದ್ದೆ.ಇದು ಅಪಾರ ಜನಪ್ರೀತಿಯನ್ನು ಗಳಿಸಿತ್ತು. ಸಮಯಾಭಾವದಿಂದ ಒಂದು ದಿನ ಈ ಕಿವಿ ಮಾತನ್ನು ಹೇಳದಿದ್ದರೆ, ಅಂದೇ ಫೋನುಗಳ ಮೂಲಕ ಯಾಕೆ ಇವತ್ತು ಕಿವಿ ಮಾತನ್ನು ಹೇಳಲಿಲ್ಲ ನೀವು’ ಎಂದು ಪ್ರೀತಿಯಿಂದ ಫೋನಿನಲ್ಲಿ ಪ್ರಶ್ನೆಯನ್ನು ಕೇಳುತ್ತಿದ್ದರು ಹಲವರು. ಈ ಎಲ್ಲ ಕಿವಿಮಾತುಗಳನ್ನು ಸೇರಿಸಿ, ಯಾಕೆ ಒಂದು ಪುಸ್ತಕವನ್ನು ನೀವು ಬರೆಯಬಾರದು ಎಂಬ ಎರಡು ದಶಕಗಳ ಪ್ರಶ್ನೆಗೆ ಈಗ ಉತ್ತರ ನಿಮ್ಮ ಮುಂದಿದೆ. ಹೌದು. ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಪುಸ್ತಕವು ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮದ ಕೊನೆಯಲ್ಲಿ ಹೇಳುತ್ತಿದ್ದ ವಿಸ್ಮಯ ವಿಜ್ಞಾನದ ಕಿವಿ ಮಾತುಗಳ ಸಂಗ್ರಹವೇ ನಂಬಿದ್ರೆ ನಂಬಿ ಬಿಟ್ರೆ ಬಿಡಿ.

About the Author

ನಾ. ಸೋಮೇಶ್ವರ
(14 May 1955)

ನಾ. ಸೋಮೇಶ್ವರ  ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.  ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ  ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...

READ MORE

Related Books