'ನಕ್ಷತ್ರಗಳ ನೆಲದಲ್ಲಿ' ಎಸ್.ಪಿ.ವಿಜಯಲಕ್ಷ್ಮಿ ಅವರ ಕೃತಿಯಾಗಿದೆ. ಬಾಹ್ಯಾಕಾಶದಿಂದ ಕಾಣುವ ಏಕೈಕ ಮಾನವ ನಿರ್ಮಿತ ಚೀನಾಗೋಡೆಯ ಇತಿಹಾಸ, ವೈಭವ, ಅಚ್ಚರಿ ಶಾಂಘೈ, ಬೀಜಿಂಗ್, ಷೆಂಜೆನ್ ಇತ್ಯಾದಿ ನಗರಗಳ ವೈಭವ, ಸೌಂದರ್ಯ, ವೈಶಿಷ್ಠ್ಯ ಆಧುನಿಕತೆಯ ನಾಗಾಲೋಟದಲ್ಲಿರುವ ಅದರ ಹಪಹಪಿ, ಅಲ್ಲಿಯ ಆಹಾರ ವೈವಿಧ್ಯ. ಟೆರ್ರಾಕೋಟಾ ವಾರ್ರಿಯರ್ಸ್ ಎಂದರೆ ಯಾರು ಮ್ಯಾಗ್ಲೆವ್ ಟ್ರೈನು ಹೇಗಿತ್ತು.? ಹುಂ, ಇವೆಲ್ಲವುಗಳ ಒಂದಷ್ಟು ಮಾಹಿತಿ, ಚಿತ್ರಣ ನಿಮಗಿಲ್ಲಿ ಲಭ್ಯ. ಇನ್ನು, ಅಲಾಸ್ಕಾ ಭಾಗಕ್ಕೆ ಬಂದರೆ , ಇದು ದೇಶವಾ, ರಾಜ್ಯವಾ? ಇದರ ಇತಿಹಾಸವೇನು ? ಅಲಾಸ್ಕಾ ಮಾರಾಟವಾಗಿತ್ತಂತೆ ನಿಜವಾ? ಇನ್ಸೈಡ್ ಪ್ಯಾಸೇಜ್ ಎಂದರೇನು ? ಕ್ಲಾಂಡಿಕೆ ಗೋಲ್ಡ್ ರಶ್ಹೀಗೆಂದರೇನು? ಗ್ಲೇಸಿಯರ್_ಕ್ರೆವಾಸ್ಸ್ ಇವೆಲ್ಲ ಏನು, ಹೇಗಿವೆ? ಟೈಟ್ಯಾನಿಕ್ ರೀತಿಯ ಭವ್ಯ ಹಡಗಿನಲ್ಲಿ ಎಂಟಾನೆಂಟು ದಿನಗಳು ಮಾಡಿದ್ದಾದರೂ ಏನು, ಕಂಡಿದ್ದಾದರೂ ಏನು ಹೀಗೆ ಈ ರಮ್ಯಾದ್ಭುತ ಹಿಮನಾಡಿನ ಅನೇಕ ವಿಚಾರಗಳನ್ನು ಸ್ಥೂಲರೂಪದಲ್ಲಿ ತಿಳಿವ ಆಸಕ್ತರಿಗೆ ಈ ನಕ್ಷತ್ರಗಳ ನೆಲದಲ್ಲಿ ಪುಸ್ತಕ ಉತ್ತಮ ಕೈಪಿಡಿಯಾಗಬಲ್ಲದು ಎನ್ನುತ್ತಾರೆ ಲೇಖಕಿ ಎಸ್.ಪಿ. ವಿಜಯಲಕ್ಷ್ಮಿ.
ಎಸ್. ಪಿ ವಿಜಯಲಕ್ಷ್ಮಿ ಅವರು ಮೂಲತಃ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದವರು. ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ನರಸಿಂಹರಾಜಪುರದಲ್ಲಿ ಮತ್ತು ಪಿಯುಸಿ ನಂತರದ ವಿದ್ಯಾಭ್ಯಾಸವನ್ನು ಭದ್ರಾವತಿಯ ಭದ್ರಾಕಾಲೇಜಿನಲ್ಲಿ ಪೂರೈಸಿದರು. ವಿಜಯ ಕರ್ನಾಟಕ, ಸುಧಾ, ತರಂಗ, ಕರ್ಮವೀರ, ತುಷಾರ, ಮಂಗಳ ಪತ್ರಿಕೆಗಳಿಗೆ ಕಥೆ, ಕವನ, ಮಹಿಳಾಲೇಖನ, ಪ್ರವಾಸ ಲೇಖನಗಳನ್ನು ಬರೆಯುತ್ತಿರುವೆ. ಕನ್ನಡ ರಾಜ್ಯೋತ್ಸವದ ಸುವರ್ಣಮಹೋತ್ಸವ ವರ್ಷದಲ್ಲಿ ಬಹಳಷ್ಟು ವೇದಿಕೆಗಳ ಹತ್ತಿಪ್ಪತ್ತು ಕವನಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿದ್ದಾರೆ. "ಮಂಗಳ" ವಾರಪತ್ರಿಕೆಯಲ್ಲಿ ಮೂರು ವರ್ಷಗಳು ಬೇರೆ ಬೇರೆ ದೇಶಗಳ "ಪ್ರವಾಸ ಕಥನ" ನಿರಂತರ ಧಾರಾವಾಹಿಯಾಗಿ ಪ್ರಕಟವಾಗಿದೆ. ಕೃತಿಗಳು : ಚಿತ್ತ ತೂಗಿದಾಗ ಮತ್ತು ...
READ MORE