‘ನಾ ನಿಮ್ಮೊಳಗು’ ವಿ. ಚಂದ್ರಶೇಖರ ನಂಗಲಿ ಅವರ ಲೇಖನಗಳಾಗಿವೆ. ವಚನಗಳಲ್ಲಿನ ತತ್ವ-ವಸ್ತುನಿಷ್ಠವಾದ ಅಭಿಪ್ರಾಯಗಳನ್ನು ಪುರಸ್ಕರಿಸುತ್ತಾ ವ್ಯಾಖ್ಯಾನಿಸಿರುವ ಅತ್ಯಂತ ವಿದ್ವತ್ತೂರ್ಣವಾದ ವಿಚಾರಮಂಥನವಿದು. ಉಪಮಾನ ಪ್ರಧಾನವಾದ ಈತನ ವಚನ ಗಳನ್ನು ಅರ್ಥೈಸಿಕೊಂಡು ತಲಸ್ಪರ್ಶಿ ಅಧ್ಯಯನ ಮಾಡಿ, 'ಶಬ್ದದೊಳಗಿನ ನಿಶಬ್ದ''ವೆಂದು ಬಣ್ಣಿಸುತ್ತ ಡಾಂಭಿಕತನದ ವಿರುದ್ಧ ಬಂಡಾಯ ಮನೋವೃತ್ತಿಯ ಧ್ವನಿಗಳೆಂದು ಗುರುತಿಸಿದ ಲೇಖನಗಳು.
ಡಾ.ವಿ.ಚಂದ್ರಶೇಖರ ನಂಗಲಿ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರು ಶ್ರೀಮತಿ ಗೌರಮ್ಮ ಮತ್ತು ಶ್ರೀ ವೆಂಕಟಾಚಲಪತಿ. ಎನ್, ಇವರ ಮಗನಾಗಿ 24.09.1956 ರಂದು ಜನಿಸಿದರು. ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆಯಲ್ಲಿ. ಬೆಳೆದದ್ದು ಕೋಲಾರ ಜಿಲ್ಲೆಯ ಮುಳುಬಾಗಲ್ ತಾಲೂಕಿನ ಗಡಿಗ್ರಾಮ ನಂಗಲಿ/ ನಂಗ್ಲಿಯಲ್ಲಿ. ನಂಗಲಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಬಿ.ಎಚ್.ಎಸ್ ಶಾಲೆಯಲ್ಲಿ ಪಡೆದರು. ತಮ್ಮ ಎಂ.ಎ (ಕನ್ನಡ) ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. ಭಾಷಾವಿಜ್ಞಾನದಲ್ಲಿ ಚಿನ್ನದಪದಕವನ್ನೂ ಗಳಿಸಿದ ಕೀರ್ತಿಗೆ ಪಾತ್ರರಾದರು. ಕನ್ನಡದಲ್ಲಿ ಚಾರಣ ಸಾಹಿತ್ಯ - ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ...
READ MORE