ಕೋಲಾರ ಜಿಲ್ಲೆಯ ಜನಪದ ಕಲೆಗಳ ಕುರಿತು ಮಂಡನೆಯಾದ ಲೇಖನಗಳ ಸಂಕಲನ ‘ಮೂಡಲ ವೈಭವ’. ತೇರಹಳ್ಳಿ ಸುತ್ತಮುತ್ತಲಿನ ಜಾನಪದ, ಜನಪದ ನೃತ್ಯಗಳು, ಗ್ರಾಮದೇವತೆಗಳು ಮತ್ತು ಸಾಂಸ್ಕೃತಿಕ ಸ್ಥಿತ್ಯಂತರ, ಜಾನಪದ ಹಿನ್ನೆಲೆಯಲ್ಲಿ ಸ್ಥಳನಾಮಗಳು, ಬಯಲಾಟದ ಹಳಮೆ, ಗಾರುಡಿಗರು, ಮಾಸ್ವೀಕರು, ಜನಾಂಗೀಯ ಅಧ್ಯಯನ, ದ್ವಿಭಾಷಾ ಜಾನಪದ ಸ್ವರೂಪ, ಅತ್ತೆ ಒಬ್ಬಳು ಬೇಕಿದ್ದಾಳೆ, ಸಂಗ್ರಹಕಾರ್ಯವೇ ನಡೆದಿಲ್ಲ, ಸಂಸ್ಕೃತಿಯ ಎಲುಬುಗಳನ್ನು ಸಂಗ್ರಹಿಸಿಡುವುದು, ಅಪರೂಪದ ಕಲೆಗಳು ಕುರಿತ ಲೇಖನಗಳ ಜೊತೆಗೆ ಜಿಲ್ಲೆಯ ಜಾನಪದ: ಸಂಗ್ರಹಣೆಯ ಸಮಸ್ಯೆ ಮತ್ತು ಸವಾಲುಗಳು ಮುಂತಾದ ಬರೆಹಗಳು ಇಲ್ಲಿವೆ.
ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಾಪಕರಾಗಿದ್ದ ಜಿ.ಆರ್. ತಿಪ್ಪೇಸ್ವಾಮಿ ಅವರು ಜಿ.ಆರ್.ಟಿ ಎಂದೇ ವಿದ್ಯಾರ್ಥಿಗಳಲ್ಲಿ ಪರಿಚಿತರಾಗಿದ್ದರು. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗುಜ್ಜನಾಡು ಗ್ರಾಮದವರಾದ ಅವರು ಬಂಗಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯು ನಿರ್ವಹಿಸಿದ್ದರು. 1994ರಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ರೀಡರ್ ಆಗಿ ಸೇರಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ಪ್ರಸ್ತಾಪ, ಪ್ರಣೀತ,ಅಭಿಮುಖ (ವಿಮರ್ಶಾ ಕೃತಿಗಳು), ಬಂದೀರೆ ನನ್ನ ಜಡೆವೊಳಗೆ, ಕೋಲಾರಮ್ಮ, ದಾಸ ಸಾಹಿತ್ಯ ಮತ್ತು ಜಾನಪದ (ಜಾನಪದ ಕೃತಿಗಳು), ಕನ್ನಡ ನಾಡಿನ ಕಲಾವಿದರು, ಬಾಲಣ್ಣ-ಭಾಗವತರು, ಜೀವನ ಕಥೆ, ಪ್ರಶಸ್ತಿ ಪಡೆದ ಮಹನೀಯರು ...
READ MORE