ʼಮೃಗಜಲ, ನಿಜಜಲʼ ಲೇಖಕ ಹೂ.ವೆ. ಶೇಷಾದ್ರಿ ಅವರ ಮೌಲಿಕ ಬರಹಗಳ ಪುಸ್ತಕವಿದು. ಆರ್ಥಿಕ ವಿಕಾಸ, ಸಾಮಾಜಿಕ ಪ್ರಗತಿಗಳಿಗೆ ಮುಖ್ಯ ಆಧಾರವಾಗಬಹುದಾದ್ದು ಭಾರತಕ್ಕೆ ಸಹಜವಾದ ಮತ್ತು ಸೃಷ್ಟಿ ವಿರೋಧವಲ್ಲದ ನೀತಿ ಸಂಹಿತೆ. ಈ ಅಂತರ್ ಧ್ವನಿಯುಳ್ಳ 21 ಮೌಲಿಕ ಬರಹಗಳು ಈ ಕೃತಿಯಾಗಿದೆ. ನೀತಿ ಸಂಹಿತೆ ಭಾರತಕ್ಕೆ ಎಷ್ಟು ಪ್ರಾಮುಖ್ಯವಾದುವು ಎಂಬುದನ್ನು ಅರ್ಥ ಗರ್ಭಿತವಾಗಿ ಲೇಖಕರು ವಿವರಿಸಿದ್ದಾರೆ. ಸಾಮಾಜಿಕ ಪ್ರಗತಿಗಳಿಗೆ ಇಲ್ಲಿಯ ಬರಹಗಳು ಪೂರಕವಾಗಿದೆ.
ಖ್ಯಾತ ಲೇಖಕ ಶೇಷಾದ್ರಿಯವರು (26-05-1926) ಹುಟ್ಟಿದ್ದು ಹೊಂಗಸಂದ್ರದಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ (19476) ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವೀಧರರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರು. 1980ರಲ್ಲಿ ಕ್ಷೇತ್ರೀಯ (ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ, ಸಂಘದ ಪ್ರಧಾನ ಕಾರ‍್ಯದರ್ಶಿಯಾಗಿಯೂ ಆಗಿದ್ದರು.ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಬರೆದರು. ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ, ವಿಮರ್ಶಾತ್ಮಕ ವಿಶ್ಲೇಷಣೆಗಳನ್ನು ಬರೆದರು. ಕೃತಿಗಳು-ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ...
READ MORE