ಮಾತುಕತೆ

Author : ಸಿ. ಜಿ. ಮಂಜುಳಾ

Pages 212

₹ 160.00




Year of Publication: 2013
Published by: ವಿಕಾಸ ಪ್ರಕಾಶನ
Address: 1541, 16ನೇ ಮುಖ್ಯರಸ್ತೆ, ಎಂ.ಸಿ.ಲೇ ಔಟ್, ವಿಜಯನಗರ, ಬೆಂಗಳೂರು - 560 040
Phone: 9900095204

Synopsys

ಸಿ.ಜಿ.ಮಂಜುಳಾ ಅವರ ಸಂದರ್ಶನ ಹಾಗೂ ಸಂದರ್ಶನ ಆಧಾರಿತ ಲೇಖನಗಳ ಸಂಗ್ರಹ ‘ಮಾತುಕತೆ’. ಈ ಸಂಕಲನದಲ್ಲಿ 50 ಬರಹಗಳಿವೆ. ಆರ್.ಪೂರ್ಣಿಮಾ ಅವರು ಈ ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕನ್ನಡ ಪತ್ರಿಕೋದ್ಯಮದಲ್ಲಿ ಮೂರು ದಶಕ ಗಳಿಂದ ಕ್ರಿಯಾಶೀಲರಾಗಿರುವ ಸಿ.ಜಿ. ಮಂಜುಳಾ ಬದುಕು ಮತ್ತು ಲೋಕವನ್ನು ಗ್ರಹಿಸುವುದು ಸಮಾನತೆಯ ನೆಲೆಯಲ್ಲಿ ಅವರ ಎಲ್ಲ ಬರಹಗಳಲ್ಲಿ ತುಂಬಿರುವುದು ಆ ನೆಲೆಯ ತುಡಿತ ಮತ್ತು ಮಿಡಿತ. ಪತ್ರಿಕೋದ್ಯಮವನ್ನು ಸಾಮಾಜಿಕ ಅನುಸಂಧಾನದ ಒಂದು ಮಾಧ್ಯಮವಾಗಿ ಪರಿಗಣಿಸಿರುವ ಅವರಿಗೆ ಸಂದಿರುವ ಹಲವು ಪ್ರಶಸ್ತಿಗಳು ಮತ್ತು ಫೆಲೋಷಿಪ್‌ಗಳು ಅವರ ತಾತ್ವಿಕ ನಿಲುವಿಗೆ ಸಿಕ್ಕ ಮನ್ನಣೆಗಳೆಂದೇ ಹೇಳಬೇಕು. 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಮಂಜುಳಾ ಈಗ ಅದರ ಸಹಸಂಪಾದಕರಾಗಿದ್ದಾರೆ. ಈ ಸಂಕಲನದಲ್ಲಿರುವ ಐವತ್ತು ಸಂದರ್ಶನಗಳು ಜಾಗತಿಕವಾಗಿ ವಿವಿಧ ರಂಗಗಳಲ್ಲಿ ಕೆಲಸ ಮಾಡುತ್ತಿರುವ ಅಪರೂಪದ ಸಾಧಕರ ಆಲೋಚನೆ ಗಳನ್ನು ಸಮಾಜದ ಮುಂದಿಡುವ ಪ್ರಾಮಾಣಿಕ ಪ್ರಯತ್ನಗಳಾಗಿವೆ. ವಿಷಯ, ವ್ಯಕ್ತಿ, ವಿಚಾರ ಮೂರೂ ದೃಷ್ಟಿಗಳಿಂದ ವಿಶಿಷ್ಟವೆನಿಸುವ ಈ ಸಂದರ್ಶನಗಳು, ಕನ್ನಡದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮದ ಸಾಧ್ಯತೆಗಳನ್ನು ವಿಸ್ತರಿಸುವ ಮಾದರಿಗಳಾಗಿವೆ ಎಂದಿದ್ದಾರೆ.

About the Author

ಸಿ. ಜಿ. ಮಂಜುಳಾ
(17 December 1958)

ಅಂಕಣಗಾರ್ತಿ, ಪತ್ರಕರ್ತೆ, ಸ್ತ್ರೀ ಸಂವೇದನೆಯಂತಹ ಹಲವು ಆಯಾಮಗಳ  ಪ್ರಮುಖ ಬರಹಗಾರ್ತಿ ಮಂಜುಳಾ ಸಿ.ಜಿ. 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು. 1958 ಡಿಸೆಂಬರ್ 17 ರಂದು ಮೈಸೂರಿನ ನಂಜನಗೂಡಿನಲ್ಲಿ ಜನಿಸಿದರು. ’ಪ್ರಜ್ಞಾ (ಹೆಣ್ಣುಮಗು ಮತ್ತು ಸ್ತ್ರೀ ಸಂವೇದನೆ ಕುರಿತ ಲೇಖನಗಳು). ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದ ಅವರು ’ಕಡೆಗೋಲು’ ಎಂಬ ಅಂಕಣವನ್ನು ಬರೆಯುತ್ತಿದ್ದರು.  “ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಡೆಸ್ಕ ಪತ್ರಿಕೋದ್ಯಮ UNFPA ಲಾಡ್ಲಿ ಮೀಡಿಯಾ ಪ್ರಶಸ್ತಿ, ಕೆಪಿಸಿಸಿಯ ಇಂದಿರಾ ಗಾಂಧಿ ಸೇವಾ ಪ್ರಶಸ್ತಿ”ಗಳು ಲಭಿಸಿವೆ. ಮಹಿಳೆಯರ ಆಸ್ತಿ ಹಕ್ಕು ಕುರಿತಾದ ಲೇಖನವು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿ ...

READ MORE

Related Books