ನಾನು ಓದುತ್ತಿರುವ ಪ್ರೌಢಶಾಲೆಯಲ್ಲಿ ಸ್ಥಾಪಿತವಾದ ಅಂಕೋಲೆಯ ಕರ್ನಾಟಕ ಸಂಘದ ಉದ್ಘಾಟನೆಯ ಸಂದರ್ಭದಲ್ಲಿ (೧೯೫೨) ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿಯವರು ರನ್ನನ ಗದಾಯುದ್ಧ ವಿಷಯವಾಗಿ ಮಾಡಿದ ಅಸ್ಖಲಿತ ಭಾಷಣದಿಂದ ನಾನು ಪ್ರಭಾವಿತನಾಗಿದ್ದೆ. ಆ ಪ್ರಭಾವ ಪ್ರೇರಣೆಯಿಂದಲೇ ನಾನು ಇಂಟರ್‌ಮಿಡಿಯೆಟ್‌ನಲ್ಲಿ ಕುಮಟಾ ಕೆನರಾ (ಡಾ. ಎ. ವಿ. ಬಾಳಿಗಾ) ಕಾಲೇಜಿನಲ್ಲಿ ಓದುತ್ತಿರುವಾಗ (೧೯೫೬) ಕಾಲೇಜಿನ ಕರ್ನಾಟಕ ಸಂಘದಲ್ಲಿ ಮಾಡಿದ ಸುದೀರ್ಘ ಭಾಷಣ “ರನ್ನನ ಗದಾಯುದ್ಧ ಕಾವ್ಯವಸ್ತು ವಿಶ್ಲೇಷಣೆ". ನಾನು ಎಂ. ಏ. ವಿದ್ಯಾರ್ಥಿಯಾಗಿದ್ದಾಗ ೧೯೬೨ ರಲ್ಲಿ ಮಂಡಿಸಿದ ಪ್ರಬಂಧ “ಪಂಪ ರತ್ನಾಕರವರ್ಣಿ ಚಿತ್ರಿಸಿದ ಭರತ ಚಕ್ರವರ್ತಿ', “ಹರಿಹರನು ಚಿತ್ರಿಸಿದ ಕಾಮ" ಪ್ರಬಂಧವೂ ಅದೇ ವರ್ಷ ಬರೆದ ಪ್ರಬಂಧವಾಗಿದೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ೧೯೮೭ ರಲ್ಲಿ ಡಿ. ವಿ. ಜಿ. ಅವರ ವಿಚಾರವಾಗಿ ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಭಾಷಣ “ಡಿ.ವಿ.ಜಿ. ಅವರ ಉಮರನ ಒಸಗೆ". ಮಾರ್ಗಕೃತಿಗಳ ವಿಷಯವಾಗಿ ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಮಾನದಲ್ಲಿ, ಆ ಕಾವ್ಯಕೃತಿಗಳ ವಿಚಾರವಾಗಿ ಸ್ವಲ್ಪ ಮಟ್ಟಿಗಾದರೂ ಅಭಿರುಚಿ ಕೆರಳಿಸುವ ಹೇತುವಿನಿಂದ, ನನ್ನ ಲೇಖನಗಳ ಹಳೆಯ ಕಡತದಲ್ಲಿ ದೂಳಿದೂಸರವಾಗಿ ಬಿದ್ದಿದ್ದ ಈ ಲೇಖನಗಳನ್ನು, ಚಿಕ್ಕ ಪುಟ್ಟ ತಿದ್ದುಪಡಿಗಳೊಂದಿಗೆ ಈಗ ಪ್ರಕಟಿಸುತ್ತಲಿದ್ದೇನೆ ಎಂದು ಲೇಖಕರು ಬೆನ್ನುಡಿಯಲ್ಲಿ ಬರೆದುಕೊಂಡಿದ್ದಾರೆ.
ಕವಿ, ನಾಟಕಕಾರ, ಪ್ರಕಾಶಕ, ಸಂಘಟಕ, ಸಮಾಜಚಿಂತಕ, ಸಾಹಿತಿ ಎನ್.ಆರ್. ನಾಯಕ ಅವರು ಜನಿಸಿದ್ದು 1935 ಜೂನ್ 28ರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲಿ ಜನನ. ಇವರ ಪೂರ್ಣ ಹೆಸರು ನಾರಾಯಣ ರಾಮ ನಾಯಕ. ತಂದೆ ರಾಮನಾಯಕರು. ತಾಯಿ ದೇವಮ್ಮ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ಯ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಬಿ.ಎ. ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಸಾಹಿತ್ಯ ಕೃಷಿಯಲ್ಲಿಯು ತೊಡಗಿಸಿಕೊಂಡಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಪ್ರಾಧ್ಯಾಪಕರಾಗಿ, ಪ್ರಾಚಾರ್‍ಯರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಜನಪದ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅವರು ಸುಗ್ಗಿ ಕುಣಿತ, ಗುಮಟೆ ಪಾಂಗು, ...
READ MORE