ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹಾಗೂ ಹಿರಿಯ ಸಾಹಿತಿ ಡಿ.ವಿ. ಗುರುಪ್ರಸಾದ್ ಅವರ ಕೃತಿ-ಮರಣದಂಡನೆಗೀಡಾದ ಕುಖ್ಯಾತ ಕೈದಿಗಳು. ತಾವು ವೃತ್ತಿಯಲ್ಲಿದ್ದಾಗ ಮರಣ ದಂಡನೆ ಶಿಕ್ಷೆಗೆ ಒಳಗಾಗಿದ್ದ ಕೈದಿಗಳನ್ನು ಭೇಟಿ ಮಾಡಿ, ಕಂಡುಕೊಂಡ ಸತ್ಯಗಳನ್ನು ದಾಖಲಿಸಿದ್ದು ಈ ಕೃತಿಯ ವೈಶಿಷ್ಟ್ಯ. ಬಹುತೇಕ ಕೈದಿಗಳು ಕ್ಯಾನ್ಸರ್ ರೋಗಿಗಳಾಗಿದ್ದು, ಅವರ ಸಾವು ಸಮೀಪಿಸುತ್ತಿದೆ ಎಂಬ ವೈದ್ಯರ ಎಚ್ಚರಿಕೆಯ ಮಾತುಗಳೂ ಲೇಖಕರನ್ನು ಕಂಗೆಡಿಸಿದ್ದವು. ಇಂತಹ ಸಂಗತಿಗಳು ಕೈದಿಗಳಿಗೆ ತಿಳಿದರೆ ಅವರ ಮಾನಸಿಕ ಸ್ಥಿತಿ ಹೇಗಿರಬಹುದು? ಬದುಕಿನ ಆಶಯಗಳೇನಿರಬಹುದು? ಎಂಬ ಕುತೂಹಲ-ಅಚ್ಚರಿಗಳು ಲೇಖಕರ ಬರವಣಿಗೆಯನ್ನು ಪ್ರೇರೇಪಿಸಿವೆ. ಭಾರತದಲ್ಲಿ ವಿವಿಧ ಜೈಲಿನಲ್ಲಿರುವ ಹಾಗೂ ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ ಕೈದಿಗಳನ್ನು ಭೇಟಿ ಮಾಡಿ, ಕೆಲವರನ್ನು ದೂರವಣಿಯಲ್ಲಿ ಮಾತನಾಡಿಸಿ, ಅವರ ಭಾವನೆಗಳಿಗೆ ಸ್ಪಂದಿಸಿದ್ದಾರೆ.
ಕೃತಿಯ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ ಅವರು ‘ಡಾ. ಡಿ.ವಿ. ಗುರುಪ್ರಸಾದ್ ಅವರು ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿ, ಕಥೆ ಹೇಳುವ ಶೈಲಿಯಲ್ಲಿ ಸಾಮಾನ್ಯ ಜನರಿಗೆ ಕ್ರಿಮಿನಲ್ ಕಾನೂನು , ಕ್ರಿಮಿನಲ್ ಅಪರಾಧಗಳನ್ನು ತನಿಖೆ ಮಾಡುವ ರೀತಿ, ಪೊಲೀಸರು ಎದುರಿಸುವ ಸವಾಲುಗಳು ಮತ್ತು ಸಮಸ್ಯೆಗಳು, ನ್ಯಾಯಾಲಯದಲ್ಲಿ ಅಪರಾಧಿಗಳ ವಿಚಾರಣೆ, ತೀರ್ಪು, ಕ್ಷಮಾದಾನ ವಿಧಿ - ವಿಧಾನ ಮತ್ತು ಒಬ್ಬ ಕೈದಿಯನ್ನ ಗಲ್ಲಿಗೇರಿಸುವ ಮುನ್ನ ಅನುಸರಿಸುವ ಕ್ರಿಯೆ, ಆ ಸಮಯದಲ್ಲಿ ಅವನ ಮಾನಸಿಕ ಸ್ಥಿತಿ, ಈ ವಿಷಯಗಳನ್ನು ಸರಳ, ಸುಂದರ ಕನ್ನಡ ಭಾಷೆಯಲ್ಲಿ ಜನರಿಗೆ ಅರ್ಥವಾಗುವಂತೆ ಹೇಳಿದ್ದಾರೆ. ಇದು ಸಾಮಾನ್ಯ ಜನರಿಗೆ ನಮ್ಮ ದೇಶದ ಕ್ರಿಮಿನಲ್ ಕಾನೂನಿನ ಬಗ್ಗೆ ಸಾಕಷ್ಟು ಅರಿವನ್ನು ಮೂಡಿಸುವುದರಲ್ಲಿ ಸಹಾಯ ಆಗುತ್ತದೆ. ಬಹುಶಃ ಕನ್ನಡ ಸಾಹಿತ್ಯ ಲೋಕದಲ್ಲಿ ಇಂತಹ ಬರವಣಿಗೆ ಅಪರೂಪ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...
READ MORE