ಮಣ್ಣಿನ ಹಣತೆ-3

Author : ಕರೀಗೌಡ ಬೀಚನಹಳ್ಳಿ

Pages 684

₹ 1500.00




Year of Publication: 2022
Published by: ಶಶಿ ಪಬ್ಲಿಕೇಷನ್‌
Address: ಜಾಲ ಮಂಗಲ, ರಾಮನಗರ ತಾಲ್ಲೂಕು 562 159
Phone: 9449803737

Synopsys

’ಮಣ್ಣಿನ ಹಣತೆ’ ಕರೀಗೌಡ ಬೀಚನಹಳ್ಳಿ ಅವರ ಪ್ರಧಾನ ಸಂಪಾದಕತ್ವದ ಕೃತಿ . ಇದು ಒಕ್ಕಲಿಗ ಸಮುದಾಯದ ಹಲವಾರು ಸಾದಕರ ಕುರಿತ ಬರಹಗಳ ಸಂಪುಟವಾಗಿದೆ. ಇದು ಮೂರನೇ ಸಂಪುಟ. ನಮ್ಮದು ಶ್ರೇಣೀಕರಣ ಸಮಾಜ, ಐದು ಸಾವಿರ ವರ್ಷಗಳಿಂದಲೂ ಈ ಶ್ರೇಣೀಕರಣದಲ್ಲಿ ಗಮನಾರ್ಹ ಬದಲಾವಣೆಗಳು ಆಗಿಲ್ಲ ಅಂದರೆ ಯಾರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಅಗತ್ಯವೇನಿಲ್ಲ. ಅಥವಾ ಇವೆಲ್ಲ ವಾಸ್ತವ ಸಂಗತಿಗಳಲ್ಲ ಎಂದು ಸಾರಾಸಗಟು ನಿರಾಕರಿಸುವುದೂ ಸಾಧ್ಯವಿಲ್ಲ. ಏಕೆಂದರೆ, ಪ್ರಭುತ್ವದ ಕಾಲದಿಂದ ಪ್ರಜಾಪ್ರಭುತ್ವದ ಕಾಲದವರೆಗೂ ಆಷ್ಟೇ ಅಲ್ಲ ಈ ದಿನದ ಈ ಕ್ಷಣದವರೆಗೂ ಈ ದೇಶದಲ್ಲಿ ಶ್ರೇಣೀಕರಣವೆಂಬುದು ಅನುಷ್ಠಾನದಲ್ಲಿರುವ ಸಾಮಾಜಿಕ ಪ್ರಕ್ರಿಯೆ, ಪ್ರಭುತ್ವದ ಕಾಲದಲ್ಲಿ ಚಾತುವರ್ಣದಲ್ಲಿ ಶ್ರೇಷ್ಠರು ಎನ್ನಿಸಿಕೊಂಡಿರುವ ಬ್ರಾಹ್ಮಣರು ಅಕ್ಷರವನ್ನು ಗುತ್ತಿಗೆ ಹಿಡಿದುಕೊಂಡವರಾಗಿದ್ದರು. ಬಹುಸಂಖ್ಯಾತರನ್ನು ಶಿಕ್ಷಣದಿಂದ ಹೊರಗಿಟ್ಟಿದ್ದರು. ಇದನ್ನು ಧಾರ್ಮಿಕ ವಿಧಿಯಾಟದಂತೆ ಮನುಧರ್ಮದಲ್ಲಿ ಪ್ರತಿಪಾದಿಸಿದ್ದರು. ಅಂತೆಯೇ ಮನುಧರ್ಮವೇ ಪ್ರಭುಗಳ ಕಾಲದಲ್ಲಿ ಜಾರಿಯಲ್ಲಿದ್ದ ಪ್ರಭು ಸಂವಿಧಾನವಾಗಿತ್ತು. ಅವನು ಆಡಳಿತ ನಡೆಸಿದರೆ ಅವನ ಆಡಳಿತದ ಸ್ವರೂಪವನ್ನು ನಿರ್ದೇಶಿಸುತ್ತಿದ್ದವರು ನಿಯಂತ್ರಿಸುತ್ತಿದ್ದವರು ಈ ಮನುವಾದಿಗಳೇ ಆಗಿದ್ದರು. ಹೀಗಾಗಿ ಪ್ರಭು ತನ್ನ ಪಟ್ಟಾಭಿಷೇಕದಿಂದ ಮೊದಲ್ಗೊಂಡು ಆಡಳಿತಾತ್ಮಕ ನ್ಯಾಯ ಸಂವಿಧಾನದ ಎಲ್ಲ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದವರು ಬ್ರಾಹ್ಮಣರೇ ಆಗಿದ್ದರು. ಸಹಜವಾಗಿ ದುಡಿಯದೆ ಉಣ್ಣುವ ಅವಕಾಶಗಳನ್ನು ಬಾಹ್ಮಣರು ಪಡೆದುಕೊಂಡರು. ದುಡಿದು ಬಂದ ದುಡಿಮೆಯ ಫಲವನ್ನು ತನ್ನ ಹಕ್ಕಾಗಿ ಪಡೆಯಲಾರದ ಕರ್ಮಸಿದ್ಧಾಂತದ ಕಟ್ಟು ಬಂಧನದಲ್ಲಿ ನರಳುವ ಕರ್ಮ ಶೂದ್ರಜಾತಿಗಳದಾಗಿತ್ತು. ಇವರು ಅಕ್ಷರದಿಂದ ಸಂಪನ್ಮೂಲಗಳ ಅಧಿಕಾರದಿಂದ ವಂಚಿತರಾಗಿದ್ದರು. ದೈಹಿಕ ದುಡಿಮೆಯ ಜೀತಗಾರಿಕೆಯೇ ಇವರ ಬಾಳಿನ ಕರ್ಮವಾಗಿತ್ತು. ಇಂಥದ್ದರ ನಡುವೆ ಅಲ್ಲಿ ಇಲ್ಲಿ ಒಳ್ಳೆಯ ಪ್ರಭುತ್ವದ ಕಾಲದಲ್ಲಿ ಈ ಜೀತಗಾರ ಸಮುದಾಯಗಳಿಗೂ ಹೊಸ ಬಾಳಿನ ಬೆಳಕಿಂಡಿಗಳು ತೆರೆದುಕೊಂಡಿದ್ದಿದೆ. ಆದರೆ ಅವು ಕೇವಲ ತೆರೆದುಕೊಂಡ ಬೆಳಕಿಂಡಿಗಳಾದುವೇ ಹೊರತು, ಬಾಳಿನಲ್ಲಿ ಹರಿದ ಪೂರ್ಣಪ್ರಮಾಣದ ಬೆಳಕಾಗಲಿಲ್ಲ ಎಂದು ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕರೀಗೌಡ ಬೀಚನಹಳ್ಳಿ
(10 September 1951)

ಕರೀಗೌಡ ಬೀಚನಹಳ್ಳಿ ಅವರು 1951 ಸೆಪ್ಟೆಂಬರ್‌ 10ರಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ವ್ಯಷ್ಟಿ-ಸಮಷ್ಟಿ ಪ್ರಬಂಧ ಮಂಡಿಸಿ  ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. .ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗದಲ್ಲಿ ಕಾರ್ಯ ನಿರ್ವಹಿಸಿದ ನಿವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಸಾರಂಗದ ನಿರ್ದೇಶಕರಾಗಿ ನಂತರ ಕುಲಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ಕನ್ನಡ ಸಾಹಿತ್ಯದೆಡೆಗಿನ ಒಲವು ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ ಮಾಡಿತ್ತು. ಇವರು ಬರೆದ ಕಥೆ, ಕವನಗಳು ತುಮಕೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯವಾಗಿವೆ. ಇವರ ಕಥೆಗಳು ...

READ MORE

Related Books