ಮನಸುಗಳ ನಡುವೆ ಪುಷ್ಪಕ ವಿಮಾನ

Author : ರೋಹಿತ್ ಚಕ್ರತೀರ್ಥ

Pages 96

₹ 80.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 08022161900

Synopsys

ವಿಜ್ಞಾನ ಕ್ಷೇತ್ರಕ್ಕಾಗಿ ಜೀವನವನ್ನು ಮುಡಿಪಾಗಿರಿಸಿದ ವಿಜ್ಞಾನಿಗಳ ತುಡಿತ-ಚಡಪಡಿಕೆಗಳನ್ನು ಲೇಖಕರು ನೀಡಿರುವ ಕೃತಿ-ಮನಸುಗಳ ನಡುವೆ ಪುಷ್ಪಕ ವಿಮಾನ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ವಿಜ್ಞಾನಿಗಳು ಅಂದು ಅಂದಾಜಿಸಿದ, ಅವರ ಮನದಾಳದಲ್ಲಿ ಪುಷ್ಪಕ ವಿಮಾನದಂತೆ ಹಾರಾಡಿದ ಆಲೋಚನೆಗಳನ್ನು ಸವಿವರವಾಗಿ ದಾಖಲಿಸಿದ ಉಪಯುಕ್ತ ಕೃತಿ.

About the Author

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ.  ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...

READ MORE

Reviews

(ಹೊಸತು, ಸೆಪ್ಟೆಂಬರ್ 2014, ಪುಸ್ತಕದ ಪರಿಚಯ)

ನಾವು ಮನುಷ್ಯರು. ನಮ್ಮನ್ನು ನಾವೇ ಶ್ರೇಷ್ಠರು, ಬುದ್ಧಿವಂತರು ಎಂದೆಲ್ಲ ತಿಳಿದುಕೊಂಡು ಬೀಗುತ್ತಿದ್ದೇವೆ. ಆಗಣಿತ ಜ್ಯೋತಿರ್ವಷ್ರಗಳಷ್ಟು ವಿಸ್ತಾರವಾಗಿ ಹರಡಿರುವ ಖ-ಗೋಲದ ವ್ಯಾಪ್ತಿಯಲ್ಲಿ ನಾವೊಂದು ಚುಕ್ಕೆ ಮಾತ್ರ ಎಂಬುದು ನಮ್ಮರಿವಿಗೆ ಬಂದಿಲ್ಲವೇ ? ಬಂದಿದೆ. ಆದರೂ ವಿಜ್ಞಾನದ ಸಾಧನೆಗಳ ಮೂಲಕ ಎಲ್ಲವನ್ನೂ ಅಂಗೈನಲ್ಲಿಯಾಗಿ ಆಡಿಸುತ್ತ ಇತರ ಜೀವಜಂತುಗಳನ್ನು ಕಡೆಗಣಿಸುತ್ತಿದ್ದೇವೆ. ಪ್ರಕೃತಿಯನ್ನು ಆರಾಧಿಸುವ ನಮ್ಮ ಪೂರ್ವಿಕರ ಪರಂಪರೆ ಮಾಯವಾಗಿ ಅದನ್ನು ದೋಚುವತ್ತ ದಾಪುಗಾಲಿಟ್ಟು ಸಾಗಿದ್ದೇವೆ. ನಮ್ಮ ಸುಖಕ್ಕಾಗಿ ಈ ಭೂಮಿಯನ್ನೇ ಆಪೋಶನ ತೆಗೆದುಕೊಂಡದ್ದೂ ಅಲ್ಲದೆ ಮುಂದೆ ಬಾಹ್ಯಾಂತರಿಕ್ಷದಲ್ಲಿ ಇನ್ನೂ ಏನೇನು ಇದೆಯೆಂದು ಆಕಾಶಗಾಮಿ ಯಾಗಿ ಸಂಚರಿಸುತ್ತಿದ್ದೇವೆ. ಅನ್ಯಗ್ರಹಗಳಲ್ಲಿ ನೀರಿನ ಹನಿ ಕಂಡರೆ ರೋಮಾಂಚನಗೊಳ್ಳುವ ಮನುಷ್ಯ ನಮ್ಮ ಭೂಗ್ರಹದ ನೀರಿನ ಸೆಲೆಗಳನ್ನೇ ಬತ್ತುವಂತೆ ಮಾಡಿದ್ದು ಎಂಥ ವಿಪರ್ಯಾಸ ! ಮಾನವನ ಕಲ್ಯಾಣಕ್ಕಾಗಿ ಇತರ ಪ್ರಾಣಿಗಳನ್ನು ಬಲಿಪಶು ಮಾಡುವಲ್ಲಿ ಆತ ಹಿಂಜರಿಯಲಿಲ್ಲ - ಹೀಗೆ ಸಾಗುತ್ತದೆ ವಿಜ್ಞಾನ ಬರಹಗಾರ ರೋಹಿತ್‌ ಚಕ್ರತೀರ್ಥ ಅವರ ಯೋಚನಾಲಹರಿ ಮತ್ತು ಬರವಣಿಗೆಯ ವೈಖರಿ, ಹೌದು, ರೋಹಿತ್‌ ಅವರ ಬರಹಗಳನ್ನು ಓದುತ್ತಿದ್ದಂತೆ ಮನುಷ್ಯನ ಸಾಧನೆ ಎಂಥ ಅದ್ಭುತ ಎಂಬ ಉದ್ಧಾರದೊಂದಿಗೆ ಅವನ ಭಸ್ಮಾಸುರನ ಅಜಾಗ್ರತೆಯ ಬಗೆಗೂ ಆತಂಕ ವಾಗುತ್ತದೆ. ನೀವಿದನ್ನು ಓದಿದರೆ ಅವರ ಮುಂದಿನ ಪುಸ್ತಕಗಳು ಯಾವುವೆಂದು ಹುಡುಕಾಡುವುದಂತೂ ಖಂಡಿತ.

Related Books