`ಮಹಾತ್ಮರ ಬಾಳಿನ ಪುಟಗಳಿಂದ’ ವಿ. ಗಣೇಶ್ ಅವರ ಲೇಖನಗಳ ಸಂಗ್ರಹವಾಗಿದೆ. ಬಿ.ವಿ.ಕೆದಿಲಾಯರು ಕನ್ನಡ ಸಾರಸ್ವತ ಲೋಕದ ಹಲವು ಪ್ರಕಾರಗಳಲ್ಲಿ ಹೆಸರು ಮಾಡಿದ ಒಬ್ಬ ಪ್ರಖ್ಯಾತ ಹಿರಿಯ ಲೇಖಕರು. ಇವರ ಯಾವುದೇ ಕೃತಿಗಳನ್ನು ಓದುತ್ತಾ ಬರವಣಿಗೆಯು ಚುಂಬಕ ಶಕ್ತಿಯಿಂದ ಓದು ಪೊರೈಸುವವರೆಗೂ ತಮ್ಮೆಡೆಗೆ ಸೆಳೆದುಕೊಂಡು ನಮ್ಮನ್ನು ಓದಿನಲ್ಲಿ ತನ್ಮಯಗೊಳಿಸುತ್ತವೆ. ಯಾವುದೇ ವಿಷಯವನ್ನು ಅರ್ಥೈಸುವಲ್ಲಿ ನಾಲ್ಕು ಮಾತುಗಳಲ್ಲಿ ಹೇಳಬಹುದಾದ್ದನ್ನು ಒಂದೇ ಮಾತಿನಲ್ಲಿ ನೇರವಾಗಿ, ಸರಳವಾಗಿ ಹಾಗೂ ಆತ್ಮೀಯವಾಗಿ ತಿಳಿಸಿಕೊಡಬಲ್ಲ ಅದ್ಭುತ ಬರವಣಿಗೆಯಲ್ಲಿ ಕ್ರಿಯಾಶೀಲ ಶಕ್ತಿಯನ್ನು ಇವರ ಕಾಣಬಹುದು. ಇವರ ಲೇಖನಗಳು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವಲ್ಲಿ ಜ್ಞಾನ ನಿಧಿಗಳಂತಿವೆ. ಮನಸ್ಸನ್ನು ತಿಳಿಗೊಳಿಸುವಲ್ಲಿ, ಬೆಳಗಿಸುವಲ್ಲಿ ಹಾಗೂ ನಮ್ಮೆಲ್ಲರ ಸಣ್ಣತನವನ್ನು ದೂರ ಮಾಡಿ ಶಾಂತಿಯನ್ನೂ, ಪುಷ್ಠಿಯನ್ನು ನೀಡುವ ಜ್ಯೋತಿ ಸ್ವರೂಪವಾಗಿದ್ದು ನಮ್ಮೊಳಗೆ ಓದುವ ಅಭಿರುಚಿಯನ್ನು ತೀವ್ರಗೊಳಿಸುತ್ತವೆ. -ವಂದಗದ್ದೆ ಚಂದ್ರಮೌಳಿ
ಅಡಿಗರ ಕವಿತೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಚಲನಶೀಲವಾಗಿಟ್ಟುಕೊಂಡಿರುವ ಧೀಮಂತರು ಕೆದಿಲಾಯರವರು. ಉಡುಪಿ ತಾಲೂಕಿನ ಬಾಳೆಕುದ್ರು ಗ್ರಾಮದಲ್ಲಿ ಸಂಸ್ಕೃತ ವಿದ್ವಾಂಸರ ಮನೆತನದಲ್ಲಿ 1937ರಲ್ಲಿ ಜನಿಸಿದ ಕೆದಿಲಾಯ ಇವರು ವಿದ್ಯಾರ್ಥಿದೆಸೆಯಿಂದಲೇ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯಗಳ ಅಧ್ಯಯನ, ಪತ್ರಿಕೆಗೆ ಬರೆಯುವ ಹವ್ಯಾಸ (ಎಂ.ಜಿ.ಎಂ ಕಾಲೇಜು ಮತ್ತು ಕರ್ನಾಟಕ ವಿ.ವಿ ಗಳಲ್ಲಿ ಶಿಕ್ಷಣ) ರೂಢಿಸಿಕೊಂಡರು. ಭಾರತೀಯ ಜೀವವಿಮಾ ನಿಗಮ ದಲ್ಲಿ ಉದ್ಯೋಗಿಯಾಗಿ, ಹಿರಿಯ ಅಧಿಕಾರಿಯಾಗಿ, ಸ್ಟಾಫ್ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ದುಡಿದು 1995ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಅಧ್ಯಯನ, ಕನ್ನಡದಲ್ಲಿ ಲೇಖನ ವ್ಯವಸಾಯ ಮಾಡಿ 7 ಸ್ವತಂತ್ರ ...
READ MORE