ಮಾಧ್ಯಮದ ಸುತ್ತಮುತ್ತ ಕೃತಿ ಬರೆದ ಲೇಖಕ ಎ.ಎಸ್.ಎನ್. ಹೆಬ್ಬಾರ್ ಅವರು ಈಗ ಅದೇ ಮಾಧ್ಯಮ ಕ್ಷೇತ್ರವನ್ನು ಆಯ್ದುಕೊಂಡು ‘ಮಾಧ್ಯಮದ ಮಧ್ಯದಿಂದ’ ಕೃತಿ ಬರೆದಿದ್ದಾರೆ. ಮಾಧ್ಯಮದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿ ಸಂಹವನ ಉಂಟು ಮಾಡಿದ ಹಲವು ಪ್ರಕರಣಗಳು, ಹಗರಣಗಳು, ಸ್ಫೋಟಕ ಸುದ್ದಿಗಳು, ವಿವಾದಗಳನ್ನು ದಾಖಲಿಸಿದ್ದು ಮಾತ್ರವಲ್ಲ; ವಿಶ್ಲೇಷಿಸಿದ್ದಾರೆ. ಇಂತಹ ಸುದ್ದಿಗಳ ಅಧ್ಯಯನ, ವಿಶ್ಲೇಷಣೆಗಳ ಮೂಲಕ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಈ ಕೃತಿಯು ಉತ್ತಮ ಆಕರವಾಗಿದೆ. ಇಲ್ಲಿಯ ಲೇಖನಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯ ಎಚ್ಚರದೊಂದಿಗೆ, ನಿರೂಪಣಾ ಶೈಲಿಯೊಂದಿಗೆ ಓದುಗರ ಗಮನ ಸೆಳೆಯುತ್ತವೆ.
ಮಾಧ್ಯಮಲೋಕದ ಕುರಿತು, ಫತ್ವಾ-ಓಟು ಹಾಕಿದರೆ ಜಾಗ್ರತೆ! ,ಇವರಿಗಿಲ್ಲವೇ ಹೃದಯ? ನಾಗರಿಕ ಕರ್ತವ್ಯ?, ಕೆವಿನ್ ಕಾರ್ಟ್ರನ ದುರಂತ ಕಥೆ, ವರದಿಗಾಗಿ ಎದೆ ಒಡೆದುಕೊಂಡವರು, ಪತ್ರಕರ್ತರು ಸಮಾಜವನ್ನು ಬಿಟ್ಟು ಇಲ್ಲ, ಒಳ್ಳೆಯ ಸುದ್ದಿಗಳಿಂದ ಸಮಾಜ ಶುದ್ದಿ- ಕೆಟ್ಟ ಸುದ್ದಿಗಳಿಂದಲ್ಲ., ಡಯಾನಾ ಸಾವಿನಲ್ಲಿ ಮಾಧ್ಯಮದ ಪಾತ್ರ ೮. ನಮ್ಮ ಮಾಧ್ಯಮದ ಮಂದಿಗೆ ಸುದ್ದಿಯ ತೆವಲು-ಅಮಲು ,ಜಾನೆಟ್ ಜಾಕ್ಸನ್ ಪ್ರಕರಣ-ಮಾಧ್ಯಮದವರ ಕಣ್ಣೆರೆಸುವ ವಿದ್ಯಮಾನ, ಜಾನೆಟ್ ಜಾಕ್ಸನ್ ಪ್ರಕರಣ-ಸಿಡಿದೆದ್ದ ಜನ, ಹೇಮಂತ ಹೆಗಡೆ ಸರ್ಕಸ್ ಮಾಧ್ಯಮದ ಸಂಗೀತ! , ಹಾಲಿಗೆ ಬಂದವ ಎಮ್ಮೆಯ ಕ್ರಯ ಕೇಳಿದಂತೆ ಹೆಗಡೆ ವರ್ತನೆ , ಸಾವಿನ ಸುದ್ದಿಗೆ ಮಾಧ್ಯಮದ ಕಾತರ-ಆತುರ, ಮಾಧ್ಯಮದೊಂದಿಗೆ ಜೇಡ್ ಗೂಡಿ ಏಳು-ಬೀಳು ೧೫. ಸಾವಿನ ಸುದ್ದಿಗಳ ಸುತ್ತ-ಮುತ್ತ ಇನ್ನೊಂದಿಷ್ಟು, ಬಾಯಿ ತಪ್ಪಿದ ಒಬಾಮಾ ಮತ್ತು ಕುತ್ತಿಗೆ ಹಿಡಿದ ಮಾಧ್ಯಮ ಹೀಗೆ ಪರಿವಿಡಿಯಲ್ಲಿ 50 ಪರಿವಿಡಿಗಳನ್ನು ಕಾಣಬಹುದಾಗಿದೆ.
ಎ.ಎಸ್.ಎನ್ ಹೆಬ್ಬಾರ್ ಎಂದೇ ಪ್ರಸಿದ್ಧರಾಗಿರುವ ಐರೋಡಿ ಶಂಕರಣನಾರಾಯಣ ಹೆಬ್ಬಾರ್ ಅವರು ಮೂಲತಃ ಕುಂದಾಪುರದವರು. ವೃತ್ತಿಯಲ್ಲಿ ವಕೀಲರಾಗಿ, ಪ್ರವೃತ್ತಿಯಲ್ಲಿ ಸಾಹಿತಿಯಾಗಿ, ಪತ್ರಕರ್ತರಾಗಿಯೂ ಗುರುತಿಸಿಕೊಂಡಿರುವ ಹೆಬ್ಬಾರ್ ಅವರು ಹತ್ತಾರು ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹತ್ತಾರು ದೇಶ ಸುತ್ತಿದ ಅನುಭವ ಇರುವ ಹೆಬ್ಬಾರರರು 50 ವರ್ಷಗಳ ಪತ್ರಿಕಾ ವೃತ್ತಿಯ ಅನುಭವಗಳ ಜೊತೆಗೆ ಪ್ರವಾಸಕಥನಗಳನ್ನು ಬರೆದಿದ್ದಾರೆ. ಸಾಹಿತ್ಯ, ಪತ್ರಿಕಾಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಕಾರ್ಯನಿರ್ವಹಿಸಿರುವ ಹೆಬ್ಬಾರರಿಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ...
READ MORE