ಲಾಕ್ ಡೌನ್

Author : ಎಂ. ಚಂದ್ರ ಪೂಜಾರಿ

Pages 72

₹ 80.00




Year of Publication: 2021
Published by: ಕಂದೀಲು ಪ್ರಕಾಶನ
Address: ಗಾಳೆಮ್ಮನ ಗುಡಿ ಬಳಿ, ಹೊಸಪೇಟೆ
Phone: 6362374245

Synopsys

ಖ್ಯಾತ ಲೇಖಕ ಡಾ. ಎಂ. ಚಂದ್ರ ಪೂಜಾರಿ ಅವರ ಲಾಕ್ ಡೌನ್ ಕೃತಿಯು ಲಾಕ್ ಡೌನ್ ಅವಧಿಯಲ್ಲಿ ಕಂಡು ಬಂದ ಜನಾಭಿಪ್ರಾಯಗಳು, ಇಂತಹ ಸನ್ನಿವೇಶವನ್ನು ಎದುರಿಸಿದ ಸಿಬ್ಬಂದಿ, ವಾರಿಯರ್‍ಸ್, ಜನಸಾಮಾನ್ಯರು, ಪ್ರಕಟಿತ ಲೇಖನಗಳು ವಿಶೇಷವಾಗಿ ಒಟ್ಟು ವ್ಯವಸ್ಥೆಯ ಮೇಲಾದ ದುಷ್ಪರಿಣಾಮ, ಈ ಅವಧಿಯಲ್ಲಿ ಸರಕಾರ ತೆಗೆದುಕೊಂಡ ತೀರ್ಮಾನಗಳು, ಜಾರಿಗೊಳಿಸಿದ ನಿಯಮಗಳು ಇತ್ಯಾದಿ ಕುರಿತ ಮೌಲಿಕ ಮಾಹಿತಿಗಳನ್ನು ಒಳಗೊಂಡಿದೆ. ಸರ್ಕಾರದ ಈ ನೀತಿಗಳು ಜನಸಾಮಾನ್ಯರ ಮೇಲೆ ಎಸಗಿದ ಪ್ರಮಾದ ಎಂದೇ ಒಟ್ಟು ಕೃತಿಯು ಹೇಳುತ್ತದೆ. ಶ್ರೀಮಂತರಿಗೆ, ಸರ್ಕಾರದ ಉನ್ನತ ಹುದ್ದೆಯಲ್ಲಿರುವವರಿಗೆ, ಉದ್ಯಮಿಗಳಿಗೆ ಇಂತಹ ವರ್ಗಕ್ಕೆ ಲಾಕ್ ಡೌನ್ ಸಮಸ್ಯೆ ಸೃಷ್ಟಿಸಿಲ್ಲ. ಆದರೆ, ಅತ್ಯಂತ ಕೆಳವರ್ಗದ ಜನತೆ, ದುಡಿಯಲೇ ಬೇಕಾದ ಹಂತದಲ್ಲಿದ್ದ ಜನತೆಗೆ ಇದು ಅವರ ಅಸ್ತಿತ್ವವನ್ನೇ ಪ್ರಶ್ನಿಸಿದೆ ಎಂದು ಅಭಿಪ್ರಾಯಪಡುತ್ತದೆ. 

ಪ್ರಸ್ತಾವನೆ, ಲಾಕ್ ಡೌನ್ ಘೋಷಣೆಗೆ ಕಾರಣ, ಲಾಕ್ ಡೌನ್ ಅಂತಿಮವಾಗಿ ದೇಶದ ಆರ್ಥಿಕ ಹಾಗೂ ಸಾಮಾಜಿಕ ಬದುಕಿಗೆ ಕೊಟ್ಟಿದ್ದೇನು? , ಭಾರತದಲ್ಲೇಕೆ ಲಾಕ್ ಡೌನ್ ವಿಫಲವಾಯಿತು?, ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಿಸುವುದು ಉತ್ತಮ ಮಾರ್ಗ ಇರಬಹುದು ಆದರೆ, ಘೋಷಿಸಿದ ರೀತಿ ಸರಿಯಲ್ಲ, ಕೊರೊನಾ ವಾರಿಯರುಗಳೇ ಶೋಷಣೆಗೆ ಒಳಗಾಗಿದ್ದಾರೆ, ಒಟ್ಟಾರೆ ವ್ಯವಸ್ಥೆಯ ಬೇಜವಾಬ್ದಾರಿತನವನ್ನು ವಿಶ್ಲೇಷಿಸುವ ಬರಹಗಳು ಕೃತಿಯ ಅರ್ಥವಂತಿಕೆಯನ್ನು ಹೆಚ್ಚಿಸಿವೆ.  

About the Author

ಎಂ. ಚಂದ್ರ ಪೂಜಾರಿ

ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿರುವ ಎಂ.ಚಂದ್ರಪೂಜಾರಿ ಅವರು ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಶೋಧನೆ: ಏನು? ಏಕೆ? ಹೇಗೆ?, ಸಮಾಜ ಸಂಶೋಧನೆ, ಸಂಶೋಧನ ಜವಾಬ್ದಾರಿ, ಸಂಶೋಧನ ಪ್ರಸ್ತಾವ, ದೇಶೀಯತೆ ನೆರಳಲ್ಲಿ ವಿಕೇಂದ್ರೀಕರಣ, ಜಂಟಿ ಅರಣ್ಯ ಯೋಜನೆ, ಅಭಿವೃದ್ಧಿ ಮತ್ತು ರಾಜಕೀಯ, ರಾಜಕೀಯದ ಬಡತನ, ಬಡತನ ಮತ್ತು ಪ್ರಜಾಪ್ರಭುತ್ವ- ಇವರ ಪ್ರಮುಖ ಕೃತಿಗಳು. ...

READ MORE

Related Books