ಲಾಕ್ಡೌನ್ ಸಮಯದಲ್ಲಿ ಆದ ತಮ್ಮ ಅನುಭವಗಳನ್ನು ಹಾಗೂ ಮರಳಿ ವಿಭಿನ್ನತೆಯತ್ತ ಮುಖಮಾಡಿದ ಧನಾತ್ಮಕ ಅಂಶಗಳ ಲೇಖನ ಸಂಗ್ರಹ ‘ಲಾಕ್ಡೌನ್’ - ದಿಗ್ಬಂಧನ ಕಲಿಸಿದ ಪಾಠಗಳು. ‘ಇತಿಹಾಸವನ್ನು ನೆನಪಿಸುವ ಕೊರೊನಾ, ಈ ವೈರಸ್ ತೋರಿಸಿದ ಅಂತಃಕರಣದ ಜಗತ್ತು, ಕೊರೊನಾ ವಾರಿಯರ್ಸ್ ಹೋರಾಟದ ಅನುಭವ, ಮನೆಯೆಂಬ ಪ್ರಪಂಚ ಮತ್ತು ಮನೆಯಲ್ಲೇ ಪ್ರಪಂಚ, ಕೊರೊನಾ ವೈದಕೀಯ ಅನುಭವ ಮುಂತಾದ ಲೇಖನಗಳ ಸಂಗ್ರಹ ಇದಾಗಿದ್ದು ರಾಧಾಕೃಷ್ಣ ಹಾಗೂ ರಂಗಸ್ವಾಮಿ ಮೂಕನಹಳ್ಳಿ ಅವರು ಸಂಪಾದಿಸಿದ್ದಾರೆ. ಡಿ. ರೂಪಾ ಮೌದ್ಗೀಲ್, ದಯಾನಂದ ಕೆ.ಎ., ರಂಗಸ್ವಾಮಿ ಮೂಕನಹಳ್ಳಿ, ರೋಹಿತ್ ಚಕ್ರತೀರ್ಥ, ಡಿ.ಮಹೇಂದ್ರ, ಡಾ. ವಿಶ್ವನಾಥ ಸುಂಕಸಾಳ ಸೇರಿದಂತೆ ಇತರೆ ಲೇಖಕರ ಒಟ್ಟು 29 ಲೇಖನಗಳು ಸಂಕಲನಗೊಂಡಿವೆ.
ರಂಗಸ್ವಾಮಿ ಮೂಕನಹಳ್ಳಿ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇರುವ ಗ್ರಾಹಕರಿಗೆ ಹಣ ಹೂಡಿಕೆಯ ತಜ್ಞ. ಸಲಹೆಗಾರರಾಗಿ ವೃತ್ತಿ ನಿರತರು. ಹಲವಾರು ಉದ್ಯಮಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ತ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತ ಬಂದಿದ್ದಾರೆ. ಕನ್ನಡ ಮತ್ತು ಸ್ಪಾನಿಷ್ ಭಾಷೆಯ ಸಮಾನಾಂತರ ಗಾದೆಗಳನ್ನು ಗುರುತಿಸಿ ಕೃತಿಯನ್ನು ರಚಿಸಿದ್ದು, ಇದು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಮೂರು ಅಂಕಣ ಗುಚ್ಛಗಳ ಕೃತಿಗಳು ಸಹ ಪ್ರಕಟಗೊಂಡಿವೆ. ‘ಬದುಕಿಗೊಂದು ಆಶಾಭಾವ, ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು’ ಅವರ ...
READ MORE