‘ಲೈಫು ಇಷ್ಟೇನೆ’ ಲೇಖಕ ಯತಿರಾಜ್ ವೀರಾಂಬುಧಿ ಅವರ ಕೃತಿ. ಜೀವನವೆಂದರೆ ಹೊಂದಾಣಿಕೆ, ರಾಜೀ ಒಪ್ಪಂದ ಮತ್ತು ಅರ್ಥಮಾಡಿಕೊಳ್ಳುವಿಕೆ. ಪ್ರತಿ ಸಲ ಇನ್ನೊಬ್ಬರ ಮಾತುಗಳು ನಮಗೆ ಇಷ್ಟವಾಗದಿದ್ದರೆ ಅವರೇಕೆ ಹಾಗೆ ಹೇಳಿದರೆಂದು ಅವರ ಪಾದರಕ್ಷೆಗಳಲ್ಲಿ ನಮ್ಮ ಪಾದ ತೂರಿಸಿ ಆಲೋಚಿಸಿದರೆ ಅವರ ದೃಷ್ಟಿಕೋನವೂ ನಮಗೆ ಅರಿವಾಗುತ್ತದೆ. ಬದುಕಿನ ವಿಶಾಲ ಅರ್ಥಗಳನ್ನು ತಿಳಿಸುವ ಪ್ರಯತ್ನ ಈ ಕೃತಿ. ಬದುಕು ನಮ್ಮ ಕೈಯಲ್ಲಿರುತ್ತದೆ, ಅದನ್ನು ಹಸನುಗೊಳಿಸುವುದು ಅಥವಾ ಬರುಡು ಭೂಮಿಯಾಗಿ ಬಿಡುವುದು ನಮ್ಮ ಕೈಯಲ್ಲೇ ಇದೆ. ಇಂತಹ ಸ್ಪೂರ್ತಿದಾಯಕ ಲೇಖನಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು- ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...
READ MORE