‘ಕುವೆಂಪು ವಿಚಾರಧಾರೆಯ ಪ್ರಸ್ತುತತೆ’ ಕೃತಿಯು ಕೆ.ಸಿ ಶಿವಾರೆಡ್ಡಿ ಮತ್ತು ಎಸ್. ವೈ ಸೋಮಶೇಖರ್ ಅವರ ಉದ್ಘಾಟನಾ ಭಾಷಣ(ಕೆ.ಎಚ್. ರಂಗನಾಥ್), ಆಶಯ ಭಾಷಣ(ಸಿದ್ಧಲಿಂಗಯ್ಯ ಪ್ರೊ.ಜಿ.ಎಸ್) ಅಧ್ಯಕ್ಷ ಭಾಷಣ(ಎನ್.ಡಿ.ವೆಂಕಟೇಶ್), ಧರ್ಮ(ಪ್ರೊ.ವಿ.ಚಂದ್ರಶೇಖರ ನಂಗಲಿ), ಭಾಷೆ( ಪ್ರೊ.ಲಿಂಗದೇವರು ಹಳೇಮನ), ಶಿಕ್ಷಣ(ಡಾ.ಕೆ.ಸಿ.ಶಿವಾರೆಡ್ಡಿ), ಮೊದಲ ಗೋಷ್ಠಿಯ ಅಧ್ಯಕ್ಷ ಭಾಷಣ( ಡಾ.ಸಿ.ಪಿ. ಕೃಷ್ಣ ಕುಮಾರ್), ಸಮಕಾಲೀನ ಚರಿತ್ರೆ(ಡಾ.ಎಸ್.ಚಂದ್ರಶೇಖರ್), ಕುವೆಂಪುರವರ 'ನೆನಪಿನ ದೋಣಿ'ಯಲ್ಲಿ ಸಾಂಸ್ಕೃತಿಕ ಆಯಾಮಗಳು( ಪ್ರೊ.ಎನ್.ಬಿ.ಚಂದ್ರಮೋಹನ್), ಎರಡನೇ ಗೋಷ್ಠಿಯ ಅಧ್ಯಕ್ಷ ಭಾಷಣ (ಗುರುಲಿಂಗ ಕಾಪಸೆ), ಕುವೆಂಪು ಕೃತಿಗಳಲ್ಲಿ ಬ್ರಾಹ್ಮಣತ್ವದ ವಿರೋಧ ಹಾಗೂ ದೇಸಿ ಚಿಂತನೆ(ಬಂಜಗೆರೆ ಜಯಪ್ರಕಾಶ್), ಸಂವಾದ(ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ), ಸಮಾರೋಪ ಭಾಷಣ(ಎಚ್.ಜೆ.ಲಕ್ಕಪ್ಪಗೌಡ), ಅಧ್ಯಕ್ಷ ಭಾಷಣ(.ಕೆ.ಚಿದಾನಂದಗೌಡ) ಇವೆಲ್ಲಾವುಗಳನ್ನು ಒಳಗೊಂಡಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜೆಯನ್ನು ಎಚ್ಚರಿಸುವ ಏಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ ಎಂದಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...
READ MORE