‘ಕುವೆಂಪು - ಒಂದು ಪುನರನ್ವೇಷಣೆ’ ಡಿ. ಎಸ್. ನಾಗಭೂಷಣ ಅವರ ಸಂಪಾದನೆಯ ಲೇಖನಗಳಾಗಿವೆ. ಕುವೆಂಪು ಅವರ ಬಗ್ಗೆ ಈ ಸಂಕಲನದಲ್ಲಿ ಮೂವತ್ತು ಲೇಖನಗಳಿದ್ದು ಬಹುಪಾಲು ಮೌಲಿಕವಾಗಿವೆ. ಸಂಪಾದಕರಾದ ಡಿ. ಎಸ್. ನಾಗಭೂಷಣ ಅವರ ಎರಡು ಬರಹಗಳು ಹಾಗೂ ಮುನ್ನುಡಿ ಕುವೆಂಪು ಅವರ ಕೃತಿಗಳ ವಿಚಾರಗಳ ಚರ್ಚೆಯ ಮುಂದುವರಿಕೆಗೆ ಸಹಾಯಕವಾಗಿವೆ. ನವೋದಯದ ಸಂದರ್ಭದಲ್ಲಿ ಕುವೆಂಪುರವರನ್ನು ಆರಾಧಕ ಮನೋಭಾವದಿಂದ ವಿಮರ್ಶಿಸಿದವರೇ ಹೆಚ್ಚು ಸದ್ಯದ ಸಂದರ್ಭದಲ್ಲಿ ಅವರಿಗೆ ಸಿಗಬೇಕಾದ ಸರಿಯಾದ ಮಾನ್ಯತೆ ದೊರೆಯಲಿಲ್ಲ. ಈಗ ಮತ್ತೆ ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಕುವೆಂಪು ಅವರ ಪ್ರಾಮುಖ್ಯತೆಯನ್ನು ಇಲ್ಲಿನ ಲೇಖನಗಳು ಚರ್ಚಿಸಿವೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MOREಹೊಸತು- ಜುಲೈ-2005
ಮುಖ್ಯ ಲೇಖಕರ ಬಗ್ಗೆ ಹೇಳಿದ್ದನ್ನೇ ಹೇಳುವ ಸಿದ್ಧ ಬರಹಗಳಿಗಿಂತ ಪುನರ್ಮೌಲ್ಯಕ್ಕೆ ಒಳಪಡಿಸುವ ಲೇಖನಗಳು ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಆರೋಗ್ಯಕರ, ಕುವೆಂಪು ಅವರ ಬಗ್ಗೆ ಈ ಸಂಕಲನದಲ್ಲಿ ಮೂವತ್ತು ಲೇಖನಗಳಿದ್ದು ಬಹುಪಾಲು ಮೌಲಿಕವಾಗಿವೆ. ಸಂಪಾದಕರಾದ ಡಿ. ಎಸ್. ನಾಗಭೂಷಣ ಅವರ ಎರಡು ಬರಹಗಳು ಹಾಗೂ ಮುನ್ನುಡಿ ಕುವೆಂಪು ಅವರ ಕೃತಿಗಳ ವಿಚಾರಗಳ ಚರ್ಚೆಯ ಮುಂದುವರಿಕೆಗೆ ಸಹಾಯಕವಾಗಿವೆ. ನವೋದಯದ ಸಂದರ್ಭದಲ್ಲಿ ಕುವೆಂಪುರವರನ್ನು ಆರಾಧಕ ಮನೋಭಾವದಿಂದ ವಿಮರ್ಶಿ ಸಿದವರೇ ಹೆಚ್ಚು ಸದ್ಯದ ಸಂದರ್ಭದಲ್ಲಿ ಅವರಿಗೆ ಸಿಗಬೇಕಾದ ಸರಿಯಾದ ಮಾನ್ಯತೆ ದೊರೆಯಲಿಲ್ಲ. ಈಗ ಮತ್ತೆ ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಕುವೆಂಪು ಅವರ ಪ್ರಾಮುಖ್ಯತೆಯನ್ನು ಇಲ್ಲಿನ ಲೇಖನಗಳು ಚರ್ಚಿಸಿವೆ. ಕುವೆಂಪು ಅವರ ಬದುಕು- ಬರಹಗಳನ್ನು ಇಲ್ಲಿನ ಬರಹಗಳು ಬೇರೆ ಬೇರೆ ನೆಲೆಯಲ್ಲಿ ಗುರುತಿಸಿವೆ. ಕನ್ನಡ ವಿಮರ್ಶೆಯ ಸಂದರ್ಭದಲ್ಲಿ ಕುವೆಂಪು ಬಗ್ಗೆ ಬಂದ ಉತ್ತಮ ಸಂಕಲನಗಳಲ್ಲಿ ಇದೂ ಒಂದು.